ಒಂದೆಡೆ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದರೆ ಇತ್ತ ಸ್ವಾತಂತ್ರ್ಯ ಸಿಗುವುದಕ್ಕೂ ಎರಡು ವರ್ಷ ಮುಂಚೆ ಶುರುವಾದ ಸರ್ಕಾರಿ ಶಾಲೆಯ ಕಟ್ಟಡವನ್ನು ಅದರ ಜಾಗ ಸಮೇತ ಮಾರಲು ಕರ್ನಾಟಕ ಬಿಜೆಪಿ ಸರ್ಕಾರದಲ್ಲಿ ಸಿದ್ಧತೆ ಶುರುವಾಗಿದೆ.
ಈ ಬಗ್ಗೆ ಕನ್ನಡದ ಪ್ರಮುಖ ದೈನಿಕ ಪ್ರಜಾವಾಣಿ ತನ್ನ ಮುಖಪುಟದಲ್ಲಿ ಸುದ್ದಿ ಪ್ರಕಟಿಸಿದೆ.
ಬೆಂಗಳೂರಿನ ಚಿಕ್ಕಪೇಟೆಯಲ್ಲಿ 1945ರಲ್ಲಿ ಶುರುವಾದ ಸರ್ಕಾರಿ ಫ್ರೌಢಶಾಲೆಯ ಕಟ್ಟಡವನ್ನು ಅದರ ಜಾಗ ಸಮೇತ ಮಾಡುವಂತೆ ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ಗಳು ಸೇರಿಕೊಂಡು ಕಟ್ಟಡ ಮತ್ತು ಜಾಗದ ಮಾರುಕಟ್ಟೆ ಮೌಲ್ಯವನ್ನು ನಿಗದಿ ಮಾಡಿ ಬೆಂಗಳೂರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.
ಈ ವರದಿ ಆಧರಿಸಿ ಬಹುಕೋಟಿ ಮೌಲ್ಯದ ಆಸ್ತಿಯನ್ನು ಮಾರಾಟ ಅಥವಾ ಹರಾಜು ಮಾಡಲು ನಿರ್ದೇಶನ ನೀಡುವಂತೆ ಕೋರಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಂದಾಯ ಇಲಾಖೆಗೆ ಪತ್ರ ಬರೆದಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಶಾಲೆಗಾಗಿಯೇ ದಾನಿಗಳು ಕೊಟ್ಟ 13,735 ಅಡಿ ವೀಸ್ತೀರ್ಣದ ಮೈದಾನದಲ್ಲಿ 1945ರಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ ಆರಂಭವಾಗಿದ್ದವು.
ಭೂಮಿಯ ಮಾರುಕಟ್ಟೆಯ ಮೌಲ್ಯ ನಿಗದಿಯಲ್ಲೂ ತಹಶೀಲ್ದಾರ್ ಮತ್ತು ಲೋಕೋಪಯೋಗಿ ಇಲಾಖೆ ಲೆಕ್ಕಾಚಾರದಲ್ಲಿ ಭಾರೀ ವ್ಯತ್ಯಾಸ ಇದೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ತಹಶೀಲ್ದಾರ್ ಪ್ರಕಾರ ಈ ಭೂಮಿಯ ಮಾರುಕಟ್ಟೆ ಮೌಲ್ಯ 27 ಕೋಟಿ ರೂ. ಆದರೆ ಲೋಕೋಪಯೋಗಿ ಇಲಾಖೆ ಪ್ರಕಾರ 50.45 ಕೋಟಿ ರೂ.
ಸರ್ಕಾರ ಚಿಕ್ಕಪೇಟೆ ಸರ್ಕಾರಿ ಶಾಲೆಯನ್ನು ಜಾ್ವನ್ನು ಖಾಸಗಿಯವರಿಗೆ ಗುತ್ತಿಗೆ ನೀಡಿತ್ತು. ಅವರಿಂದ 2008ರಿಂದ ಬಿಬಿಎಂಪಿಗೆ ಬಾಕಿ ಇರುವ ತೆರಿಗೆ ಮೊತ್ತವೇ 13.49 ಕೋಟಿ ರೂ. ಎಂದು ಪ್ರಜಾವಾಣಿ ವರದಿ ಮಾಡಿದೆ.