ಈ ಬಾರಿಯೂ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಲ್ಲೇ ಸಾರಿಗೆ ಸಚಿವ ಶ್ರೀರಾಮುಲು ಮತ್ತೆ ವಿಧಾನಸಭಾ ಚುನಾವಣೆಗೆ ನಿಲ್ಲಲಿದ್ದಾರೆ.
ಈ ಬಗ್ಗೆ ಅವರೇ ಸ್ವತಃ ಘೋಷಿಸಿಕೊಂಡಿದ್ದಾರೆ.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕೋನಾಪುರದಲ್ಲಿ ಮಾತಾಡಿದ ರಾಮುಲು ಇನ್ನೊಂದು ಅವಕಾಶ ಮಾಡಿಕೊಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಪ್ರಥಮ ಬಾರಿಗೆ ಮೊಳಕಾಲ್ಮೂರು ತಾಲೂಕಲ್ಲಿ ಬಿಜೆಪಿ ಗೆದ್ದಿದೆ. ಬೇರೆ ಬೇರೆ ಶಾಸಕರು ಗೆದ್ದ ಟೈಂನಲ್ಲಿ ಯಾವ ರೀತಿ ಅಭಿವೃದ್ಧಿ ಕಾರ್ಯ ಆಗಿದೆ, ರಾಮುಲು ಗೆದ್ದ ಬಳಿಕ ಏನೇನಾಯ್ತು ಅಂತ ನೀವು ಬೇಕಾದ್ರೆ ವಿಶ್ಲೇಷಣೆ ಮಾಡಿ. ಅವರಿಗಿಂತ ಜಾಸ್ತಿ ಕೆಲಸ ಮಾಡಿದ್ದೀನಿ. ಇನ್ನೊಂದು ಅವಕಾಶ ಮಾಡಿಕೊಡ್ರಿ. ನಿಮ್ಮ ಎಲ್ಲ ಕೆಲಸ ಮಾಡಿಕೊಟ್ಟು ಪುನಃ ಈ ಜಿಲ್ಲೆಯಿಂದ ಹೊರಹೋಗ್ತೀನಿ
ಎಂದು ಸಚಿವ ರಾಮುಲು ಮೊಳಕಾಲ್ಮೂರು ತಾಲೂಕಿನ ಜನರಲ್ಲಿ ಮನವಿ ಮಾಡಿದ್ದಾರೆ.