ಅತ್ಯಾಚಾರ ಪ್ರಕರಣದಲ್ಲಿ ವಿವಾದಿತ ನಿತ್ಯಾನಂದ ಸ್ವಾಮೀಜಿ ( Nithyananda Swamiji )ಮೇಲೆ ಅರೆಸ್ಟ್ ವಾರೆಂಟ್ ಜಾರಿ ಮಾಡಿ ರಾಮನಗರ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
20120 ರಲ್ಲಿ ನಿತ್ಯಾನಂದ ಸ್ವಾಮೀಜಿ(Nithyananda Swamiji)ಯ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸುತ್ತಿರುವ ರಾಮನಗರದ ಜಿಲ್ಲಾ ಹೆಚ್ಚುವರಿ ಹಾಗೂ ಸೆಷನ್ಸ್ ನ್ಯಾಯಾಲಯ ಇಂದು ಜಾಮೀನು ರಹಿತ ( Non Bailable) ಬಂಧನದ ವಾರೆಂಟ್ ಜಾರಿ ಮಾಡಿದೆ.
ಈ ಹಿಂದೆ ಮುಕ್ತ ವಾರೆಂಟ್ನ್ನು ನ್ಯಾಯಾಲಯ ಜಾರಿ ಮಾಡಿತ್ತು. ಆದರೆ, ಪೊಲೀಸರು ನಿತ್ಯಾನಂದನನ್ನು ರಕ್ಷಿಸುವಲ್ಲಿ ಅಥವಾ ಪತ್ತೆಹಚ್ಚುವಲ್ಲಿ ವಿಫಲರಾಗಿದ್ದರು.
ಇದನ್ನೂ ಓದಿ : ಸಮಾಧಿ ಸೇರಿಕೊಂಡನೆ ಬಿಡದಿ ನಿತ್ಯಾನಂದ
ಅತ್ಯಾಚಾರ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಲಯ 3 ಜನ ಸಾಕ್ಷಿದಾರರನ್ನು ವಿಚಾರಣೆ ನಡೆಸಿದೆ. ಆದರೆ, ನಿತ್ಯಾನಂದನ ಹಾಜರಾತಿ ಇಲ್ಲದೇ ಇರುವುದರಿಂದ ಕಳೆದ 3 ವರ್ಷಗಳಿಂದ ವಿಚಾರಣೆ ನಡೆದಿರಲಿಲ್ಲ.
2019 ರಿಂದ ನ್ಯಾಯಾಲಯ ನೀಡಿದ್ದ ಯಾವುದೇ ಸಮನ್ಸ್ಗೂ ನಿತ್ಯಾನಂದ ಸ್ವಾಮೀಜಿ(Nithyananda Swamiji) ಪ್ರತಿಕ್ರಿಯೆ ನೀಡಿಲಿಲ್ಲ. ಇದೀಗ ನೀಡಿರುವ ಜಾಮೀನು ರಹಿತ ಬಂಧನ ವಾರೆಂಟ್ನ್ನು ಸೆಪ್ಟಂಬರ್ 23 ರ ಒಳಗಾಗಿ ನ್ಯಾಯಾಲಯಕ್ಕೆ ಹಿಂತಿರುಗಿಸಬಹುದಾಗಿದೆ. ಆದರೆ, ಇದಕ್ಕೆ ನಿತ್ಯಾನಂದರೇ ಸ್ವಯಂ ನ್ಯಾಯಾಲಯದ ಮುಂದೆ ಹಾಜರಾಗಬೇಕು.
2010 ರಲ್ಲಿ ನಿತ್ಯಾನಂದ ಸ್ವಾಮೀಜಿಯವರ ಕಾರು ಚಾಲಕ ಲೆನಿನ್ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯಾನಂದ ಸ್ವಾಮೀಜಿಯವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ : ನಿತ್ಯಾನಂದ ಕೈಲಾಸಕ್ಕೆ ಭಾರತೀಯರಿಗಿಲ್ಲ ಪ್ರವೇಶ
2020 ರಲ್ಲಿ ನಿತ್ಯಾನಂದ ದೇಶ ತೊರೆದಿದ್ದಾನೆ ಎಂದು ಅರ್ಜಿದಾರ ಲೆನಿನ್ ನ್ಯಾಯಾಲಯದ ಕೋರ್ಟ್ ಗಮನಕ್ಕೆ ತಂದ ಬೇಲೆ ಬೇಲ್ ರದ್ದಾಗಿತ್ತು.
ದೇಶ ತೊರೆದಿರುವ ನಿತ್ಯಾನಂದ ಸ್ವಾಮೀಜಿ ಕೈಲಾಸ ಎನ್ನುವ ಸ್ವಂತ ದೇಶ ಸೃಷ್ಠಿಸಿಕೊಂಡು ಆಶ್ರಮ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಸ್ಥಳದ ಬಗ್ಗೆಯೇ ಇನ್ನೂ ಹಲವು ಊಹಾಪೋಹಗಳಿವೆ.
ವಿವಾದಿತ ಸ್ವಾಮೀಜಿ 2019 ರ ನಂತರ ನ್ಯಾಯಾಲಯದ ವಿಚಾರಣೆಗೆ ಪ್ರತಿಕ್ರಿಯಿಸಿಲ್ಲ. ಆದ್ದರಿಂದ ರಾಮನಗರ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
ಇದನ್ನೂ ಓದಿ : ನಿತ್ಯಾನಂದನ ವಿರುದ್ಧ ನೀಲಿ ನೋಟಿಸ್ – ನೀಲಿ ನೋಟಿಸ್ ಯಾಕೆ..? ಇಲ್ಲಿದೆ ಸಂಪೂರ್ಣ ಮಾಹಿತಿ