ಶನಿವಾರ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಮುನಾವರ್ ಫಾರುಕಿಯವರ ( Munawar Faruqui) ಸ್ಟಾಂಡ್ ಅಪ್ ಕಾಮಿಡಿ ಕಾರ್ಯಕ್ರಮ ರದ್ದಾಗಿದೆ. ಆ ಮೂಲಕ ಬೆಂಗಳೂರಿನಲ್ಲಿ ಮುನಾವರ್ ಫಾರೂಕಿಯವರ 2 ಕಾರ್ಯಕ್ರಮಗಳು ಬೆಂಗಳೂರಿನಲ್ಲಿ ರದ್ದಾದಂತಾಗಿದೆ.
ಇಂದು ಶನಿವಾರ ಮುನಾವರ್ ಫಾರುಕಿಯವರ( Munawar Faruqui) ‘ಡೋಂಗ್ರಿ ಟು ನೌವ್ವೇರ್’ (Dongri to Nowhere) ಎನ್ನುವ ಸ್ಟ್ಯಾಂಡ್ ಅಪ್ ಕಾಮಿಡಿ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ನಿಯೋಜಕರು ಕಾರ್ಯಕ್ರಮ ನಡೆಸಲು ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಮುನಾವರ್ ಫಾರೂಕಿ ಕಾರ್ಯಕ್ರಮ ರದ್ದು ಮಾಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಜೈ ಶ್ರೀರಾಮ ಸೇನಾ ಸಂಘಟನೆ ಕಾಮಿಡಿಯನ್ ಹಾಗೂ ಕಾರ್ಯಕ್ರಮ ಆಯೋಜಕರ ಮೇಲೆ ಪ್ರಕರಣ ದಾಖಲಿಸಿದೆ ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ : ಪುನೀತ್ ರಾಜ್ಕುಮಾರ್ ಚಾರಿಟಿ ಆಯೋಜಿಸಿದ್ದ ಮುನಾವರ್ ಫಾರೂಕಿಯ ಸ್ಟಾಂಡ್ ಅಪ್ ಶೋ ರದ್ದು
ಫಾರುಕಿ ಅವರು ತಮ್ಮ ಶೋಗಳಲ್ಲಿ ಭಗವಾನ್ ರಾಮ ಮತ್ತು ಸೀತೆಯ ವಿರುದ್ಧ ಅವಮಾನಕರ ಹೇಳಿಕೆಗಳನ್ನು ನೀಡುವ ಮೂಲಕ ಹಿಂದೂ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಜೈ ಶ್ರೀ ರಾಮ ಸೇನಾ ಸಂಘಟನೆಯು ತನ್ನ ದೂರಿನಲ್ಲಿ ಆರೋಪಿಸಿದೆ.
ಇದೇ ಕಾಮಿಡಿಯನ್ ಮುನಾವರ್ ಫಾರುಕಿಯವರ ನವೆಂಬರ್ 2021 ರಲ್ಲಿ ಇದೇ ಆವರಣದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ರದ್ದಾಗಿತ್ತು.