ಇಯರ್ಫೋನ್ಗಳನ್ನು ಧರಿಸಿ ರೈಲ್ವೆ ಹಳಿಗಳ ಮೇಲೆ ನಡೆಯುತ್ತಿದ್ದ ಇಬ್ಬರ ಮೇಲೆ ರೈಲು ಹರಿದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಭದೋಹಿ ರೈಲ್ವೆಸ್ಟೇಷನ್ ವಾರ್ಡ್ನಲ್ಲಿ ಇಬ್ಬರು ರೈಲಿಗೆ ಸಿಲುಕಿದ್ದರೆ, ಮತ್ತೊಬ್ಬ ಅಹಿಮಾನ್ಪುರದಲ್ಲಿ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಈ ಮೂವರು ವಾಕಿಂಗ್ಗೆ ತೆರಳಿದಾಗ ಈ ಘಟನೆ ನಡೆದಿದೆ.
ಜಲಾಲ್ಪುರದ ಕೃಷ್ಣ ಅಲಿಯಾಸ್ ಬಂಗಾಲಿ (20) ಮತ್ತು ಆತನ ಸ್ನೇಹಿತ ಮೋನು (18) ಇಯರ್ ಫೋನ್ನಲ್ಲಿ ಹಾಡು ಕೇಳುತ್ತಾ ಹಳಿಯ ಮಧ್ಯದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅತಿ ವೇಗದಲ್ಲಿ ಬರುತ್ತಿದ್ದ ಹೌರಾ ಲಾಲ್ಕುವಾಲ್ ಎಕ್ಸ್ಪ್ರೆಸ್ನ ಶಬ್ದ ಆ ಯುವಕರಿಗೆ ಕೇಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಬ್ಬರು ಯುವಕರಿಗೆ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ : ಹಳಿ ಮೇಲೆ ನಿಂತು ಸೆಲ್ಫಿ : ರೈಲು ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಸಾವು
ಎಷ್ಟೇ ಹೊತ್ತಾದರೂ ಈ ಇಬ್ಬರೂ ಯುವಕರೂ ಮನೆಗೆ ಬಾರದಿದ್ದರಿಂದ, ಕುಟುಂಬಸ್ಥರು ಅವರನ್ನು ಹಡುಕಲು ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಯುವಕರ ಮೃತದೇಹಗಳು ಪತ್ತೆ ಆಗಿವೆ.