ರಾಜ್ಯದಲ್ಲಿ ಕೆಲವು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಜೋರಾಗಲಿದೆ. ಇಂದಿನಿಂದ ಮತ್ತೆ ಮಳೆ (Rain)ಪರ್ವ ಆರಂಭ ಆಗಲಿದ್ದು, ಆಗಸ್ಟ್ 23ರ ನಂತರ ಬಿರುಸು ಪಡೆಯುವ ಸಂಭವ ಇದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ.
ಆಗಸ್ಟ್ 21, ಆಗಸ್ಟ್ 22ರಂದು ರಾಜ್ಯದಲ್ಲಿ ವಿಸ್ತರವಾಗಿ ಹಗುರ ಮಳೆ ಆಗಲಿದೆ. ಆಗಸ್ಟ್ 23ರಿಂದ ಮೂರು ದಿನ ದಕ್ಷಿಣ ಕನ್ನಡ(South Canara), ಉತ್ತರ ಕನ್ನಡ(North Canara), ಉಡುಪಿ(Udupi), ಚಿಕ್ಕಮಗಳೂರು (Chikkamagalore), ಶಿವಮೊಗ್ಗ(Shivamogga), ಹಾಸನ(Hassan), ಕೊಡಗು(Kodagu), ಮೈಸೂರು(Mysore), ಕೋಲಾರ(Kolar) ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ (Yellow Alert)ಪ್ರಕಟಿಸಲಾಗಿದೆ.
ಆಗಸ್ಟ್ 24ರಂದು ಬೆಂಗಳೂರು ನಗರ (Benagluru urban), ಬೆಂಗಳೂರು ಗ್ರಾಮಾಂತರ(Bengaluru rural), ಬಳ್ಳಾರಿ(Bellary), ತುಮಕೂರು(Tumkur), ರಾಮನಗರ(Ramanagar), ಚಿಕ್ಕಬಳ್ಳಾಪುರ (Chikkaballapur), ಚಿತ್ರದುರ್ಗ(Chitradurga), ಚಾಮರಾಜನಗರ (Chamarajanagara) ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ನೀಡಲಾಗಿದೆ.
ಶನಿವಾರವಾದ ನಿನ್ನೆ ಉತ್ತರಕನ್ನಡದ ಕ್ಯಾಸೆಲ್ ರಾಕ್ (Cassel Rock) ನಲ್ಲಿ 60 ಮಿಲಿ ಮೀಟರ್ ಮಳೆ ಆಗಿದೆ. ಯಾದಗಿರಿಯ (Yadagiri)ಸೈದಾಪುರದಲ್ಲಿ 40 ಮಿಲಿ ಮೀಟರ್ ಬಿದ್ದಿದೆ. ಉತ್ತರಕನ್ನಡ ಜಿಲ್ಲೆಯ ಕದ್ರಾ ಮತ್ತು ಜಗಲ್ ಬೆಟ್ಟದಲ್ಲಿ ತಲಾ 30 ಮಿಲಿ ಮೀಟರ್ ಮಳೆ ಆಗಿದೆ.