ಸಾಹೇಬ, ಮುಗಿಲುಪೇಟೆ, ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ರವಿಂಚಂದ್ರನ್ ಪುತ್ರ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಸಂಗೀತಾ ದೀಪಕ್ ಜತೆ ಮನೋರಂಜನ್ ( Manoranjan Ravichandran ) ಹಸೆಮಣೆ ಏರಿದ್ದಾರೆ.
ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರ ಹಿರಿಯ ಪುತ್ರ ನಟ ಮನೋರಂಜನ್ (Manoranjan Ravichandran ) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಗಸ್ಟ್ 21 ರಂದು 8.30ರ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ಮಾಡುವ ಮೂಲಕ ಸಂಗೀತಾ ಎಂಬವರ ಕೈ ಹಿಡಿದಿದ್ದಾರೆ.

ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ನಲ್ಲಿನ ವೈಟ್ ಪೆಟಲ್ಸ್ ತ್ರಿಪುರವಾಸಿನಿಯಲ್ಲಿ ನಡೆದ ಶುಭಘಳಿಗೆಯಲ್ಲಿ ಚಿತ್ರರಂಗದ ಕೆಲ ಗಣ್ಯವ್ಯಕ್ತಿಗಳು ಭಾಗವಹಿಸಿದ್ದರು.
ಇದೇ ವೇಳೆ ರವಿಚಂದ್ರನ್ ರ ಆಪ್ತರಾಗಿರುವ ಡಾ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್, ನಟಿ ಖುಷ್ಬೂ, ಉಮಾಶ್ರೀ, ನಟ ಶರಣ್, ಉಮಾಶ್ರೀ, ಮಾಸ್ಟರ್ ಆನಂದ್, ಗಾಯಕ ಹೇಮಂತ್, ಅಕುಲಗ ಬಾಲಾಜಿ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಈ ವೇಳೆ ಅಭಿಮಾನಿಗಳು ಕೂಡ ನೆಚ್ಚಿನ ನಟನ ಹೊಸ ಬಾಳಿಗೆ ಶುಭಹಾರೈಸಿದ್ದಾರೆ. ಚಿತ್ರರಂಗದಲ್ಲಿ ಕೂಡ ಉತ್ತುಂಗಕ್ಕೆ ಎರಲಿ ಎಂಬುದೇ ಅಭಿಮಾನಿಗಳ ಆಶಯ.