ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ಬಿಜೆಪಿ ಮುಖಂಡ ಹಾಗೂ ಚಿನ್ನದ ವ್ಯಾಪಾರಿ ಜಗನ್ನಾಥ ಶೆಟ್ಟಿ (Vishwanath Shetty) ಹನಿಟ್ರ್ಯಾಪ್ ಗೆ ಒಳಗಾಗಿರುವ ಪ್ರಕರಣ ತಡವಾಗಿ ವರದಿಯಾಗಿದೆ.
ಪ್ರತಿಷ್ಠಿತ ಚಿನ್ನದ ವ್ಯಾಪಾರಿಯಾಗಿರುವ ಜಗನ್ನಾಥ ಶೆಟ್ಟಿ(Vishwanath Shetty) ಯವರು ಕಳೆದ 6 ತಿಂಗಳ ಹಿಂದೆಯೇ ಹನಿಟ್ರ್ಯಾಪ್ಗೆ ಒಳಗಾಗಿ 50 ಲಕ್ಷ ಕಳೆದುಕೊಂಡಿದ್ದಾರೆ ಎಂದು ತಿಳಿದಬಂದಿದೆ.
ದಕ್ಷಿಣ ಕನ್ನಡದ ಪ್ರಭಾವಿ ಬಿಜೆಪಿ ಮುಖಂಡರಾಗಿರುವ ಜಗನ್ನಾಥ ಶೆಟ್ಟಿ(Vishwanath Shetty) ಯವರು ಮಂಡ್ಯದಲ್ಲಿರುವ ಪ್ರತಿಷ್ಠಿತ ಶ್ರೀನಿಧಿ ಗೋಲ್ಡ್ ಚಿನ್ನದ ಅಂಗಡಿಯ ಮಾಲೀಕರಾಗಿದ್ದಾರೆ. ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಜಗನ್ನಾಥ್ ಅವರು ದೂರು ದಾಖಲಿಸಿದ್ದು, ಈ ಸಂಬಂಧ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ.
ಹನಿಟ್ರ್ಯಾಪ್ ನಡೆದಿದ್ದು ಹೇಗೆ..?
ಜಗನ್ನಾಥ ಶೆಟ್ಟಿಯವರು ಕಳೆದ ಫೆಬ್ರವರಿ 26 ರಂದು ಮಂಡ್ಯದಲ್ಲಿ ಮಂಗಳೂರಿಗೆ ತೆರಳಲು ಬಸ್ಸಿಗಾಗಿ ಕಾದು ಕುಳಿತಿದ್ದರು. ಮೈಸೂರಿಗೆ ಡ್ರಾಪ್ ಕೊಡೋದಾಗಿ ನಾಲ್ವರು ಇವರನ್ನು ಕಾರಿಗೆ ಹತ್ತಿಸಿಕೊಂಡಿದ್ದರು. ಗೋಲ್ಡ್ ಬಿಸ್ಕೆಟ್ ಅಸಲಿಯತ್ತು ಪರೀಕ್ಷೆಗೆ ಹೋದಾಗ ಆರೋಪಿಗಳು ಬ್ಲಾಕ್ ಮೇಲೆ ಮಾಡಿದ್ದಾರೆ.
ಇದನ್ನೂ ಓದಿ : BIG BREAKING: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಬಂಧ – ಮತ್ತೆ 2 ದಿನ ವಿಸ್ತರಣೆ
ಮೈಸೂರಿನ ಲಾಡ್ಜ್ವೊಂದಕ್ಕೆ ಕರೆದೊಯ್ದಿದ್ದ ಆರೋಪಿಗಳು ಹನಿಟ್ರ್ಯಾಪ್ ಮಾಡಿದ್ದಾರೆ. ಲಾಡ್ಜ್ ಕರೆದೊಯ್ಯುತ್ತಿದ್ದಂತೆಯೇ ಯುವತಿ ಜೊತೆಗೆ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಈ ವಿಡಿಯೋ ಮಾಡುತ್ತಲೇ ಆರೋಪಿಗಳು 4 ಕೋ.ರೂಗೆ ಬೇಡಿಕೆ ಇಟ್ಟಿದ್ದಾರೆ. ಅಂತಿಮವಾಗಿ ವಿಶ್ವನಾಥ ಶೆಟ್ಟರು 50 ಲಕ್ಷ ನೀಡಿ ಬಿಡಿಸಿಕೊಂಡಿದ್ದರು. ಇದೀಗ, ಆರೋಪಿಗಳು ಮತ್ತೆ ಹಣಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.