ಜಾರ್ಖಂಡ್ ನ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆ ( Heavy Rain ) ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಜಾರ್ಖಂಡ್ನ ಪಾಲಮು ಮತ್ತು ಹಝಾರಿಬಾಗ್ ಜಿಲ್ಲೆಗಳಲ್ಲಿ ಭಾನುವಾರ ಸುರಿದ ಭಾರಿ ಮಳೆ( Heavy Rain ) ಸುರಿದಿದೆ. ಮಳೆಯಿಂದ ಉಂಟಾದ ಎರಡು ಪ್ರತ್ಯೇಕ ಅವಘಡಗಳಲ್ಲಿ ಆರು ಮಕ್ಕಳು ನೀರುಪಾಲಾಗಿದ್ದಾರೆ.
ಪಾಲಮು ಜಿಲ್ಲೆಯಲ್ಲಿ ಸತ್ಬಾರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗ್ರಾಫೈಟ್ ಗಣಿಯೊಂದರಲ್ಲಿ ಸ್ನಾನ ಮಾಡಲು ತೆರಳಿದ್ದ ಸಂದರ್ಭ ದುರ್ಘಟನೆ ಸಂಭವಿಸಿ, ಮೂವರು ಮಕ್ಕಳು ಮೃತಪಟ್ಟಿದ್ದಾರೆ.
ಇದನ್ನೂ ಓದಿ : ಭಾರೀ ಮಳೆ : ಈ 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ನೀರಿಗೆ ಇಳಿದಿದ್ದ ಓರ್ವ ಬಾಲಕನನ್ನು ರಕ್ಷಿಸಲು ಮತ್ತಿಬ್ಬರು ಬಾಲಕರು ಪ್ರಯತ್ನಿಸಿದ್ದು, ಆ ಸಂದರ್ಭದಲ್ಲಿ ಅವರೂ ಮುಳುಗಿದ್ದಾರೆ. ಅವರ ಜತೆಗಿದ್ದ ಮತ್ತೋರ್ವ ಬಾಲಕ ಮರಳಿ ಬಂದು ಪಾಲಕರಿಗೆ ವಿಷಯ ತಿಳಿಸಿದ್ದಾನೆ.
ಹಝಾರಿಬಾಗ್ನಲ್ಲಿ ನಡೆದ ಮತ್ತೊಂದು ದುರಂತದಲ್ಲಿ, ಬಿಎಸ್ಎಫ್ ತರಬೇತಿ ಶಿಬಿರದ ಸಮೀಪವಿದ್ದ ಜಲಾಶಯಕ್ಕೆ ಸ್ನಾನಕ್ಕೆ ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೂವರು ಕೂಡ ಬಿಎಸ್ಎಫ್ ಸಿಬ್ಬಂದಿ ಮಕ್ಕಳು ಎಂದು ಪೊಲೀಸರು ತಿಳಿಸಿದ್ದಾರೆ.