ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸೆಪ್ಟೆಂಬರ್ 2ರಂದು ಮಂಗಳೂರಿಗೆ (Mangalore)ಭೇಟಿ ನೀಡಲಿದ್ದು, ಅದ್ಧೂರಿ ಸ್ವಾಗತಕ್ಕೆ ಬಿಜೆಪಿ (BJP)ಭರದ ಸಿದ್ಧತೆ ನಡೆಸಿದೆ. ಆದರೆ, ಇನ್ನೊಂದೆಡೆ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ( Naleen Kumar Kateel ) ಇನ್ನೊಂದು ಅವಧಿಗೆ ಸಂಸದರಾಗಿ ಮುಂದುವರಿಯಲು ಅವಕಾಶ ನೀಡಬಾರದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ‘ಹಿಂದುತ್ವ’ದ ಕಾರ್ಯಕರ್ತರು (Hindutva)ಅಭಿಯಾನ ನಡೆಸುತ್ತಿದ್ದಾರೆ.
ಬಿಜೆಪಿ ರಾಜ್ಯ ಘಟಕದ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ರ( Naleen Kumar Kateel ) ಅಧಿಕಾರವಧಿ ಇದೇ ತಿಂಗಳಲ್ಲಿ ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಕಟೀಲ್ ಅವರನ್ನು ಮತ್ತೊಂದು ಅವಧಿಗೆ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲು ಅವಕಾಶ ನೀಡಬಾರದು. ಹಾಗೆಯೇ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು ಎಂದು ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕರಾವಳಿ ಭಾಗಕ್ಕೆ ಹಿಂದುತ್ವದ ಜೊತೆಗೆ ಅಭಿವೃದ್ಧಿ ಮಾಡುವ ನಾಯಕ ಬೇಕು. ಆದ್ದರಿಂದ ಪ್ರಧಾನಿ ಮಂಗಳೂರಿಗೆ ಬರುವ ಮುನ್ನವೇ ರಾಜ್ಯಾಧ್ಯಕ್ಷರ ಬದಲಾವಣೆ ಆಗಬೇಕು ಎಂದು ಪೋಸ್ಟ್ಕಾರ್ಡ್ (PostCard) ಸಂದೇಶವೊಂದನ್ನು ಹಂಚಿಕೊಂಡಿದೆ. ಈ ಪೋಸ್ಟ್ ಶೇರ್ ಮಾಡಿಕೊಳ್ಳುತ್ತಿರುವ ಬಿಜೆಪಿ ಕಾರ್ಯಕರ್ತರು ಕಟೀಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ತಾಯಿ ಖಾತೆಗೆ ಸರ್ಕಾರದಿಂದ 1 ಲಕ್ಷ ರೂಪಾಯಿ ಜಮೆ – ಯಾವ ಯೋಜನೆಯ ಹಣ ಎಂದ ಕಾಂಗ್ರೆಸ್
ಪಕ್ಷದ ಕಾರ್ಯಕರ್ತರನ್ನು ಸರಿಯಾಗಿ ಭೇಟಿ ಮಾಡುತ್ತಿಲ್ಲ, ಅವರ ಅಹವಾಲು ಕೇಳುತ್ತಿಲ್ಲ ಎಂಬುದು ಕಾರ್ಯಕರ್ತರ ಪ್ರಮುಖ ಆರೋಪವಾಗಿದೆ. ಸ್ಥಳೀಯ ಬಿಜೆಪಿ ನಾಯಕರು ಪಕ್ಷದ ಕೆಲವು ಅತೃಪ್ತ ಕಾರ್ಯಕರ್ತರೊಂದಿಗೆ ಮಾತನಾಡಿ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ಮಾಡಿದ್ದಾಗ್ಯೂ ಯಶಸ್ವಿಯಾಗಿಲ್ಲ ಎಂದು ತಿಳಿದುಬಂದಿಲ್ಲ.
ಇತ್ತೀಚೆಗೆ ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮನೆಗೆ ಕಟೀಲ್ ತಡವಾಗಿ ಬಂದಾಗ ಪಕ್ಷದ ಕಾರ್ಯಕರ್ತರು ಕಟೀಲ್ ಅವರ ಕಾರಿನ ಮೇಲೆ ಮುತ್ತಿಗೆ ಹಾಕಿದ್ದರು. ಮತ್ತು ಅವರ ವಿರುದ್ಧ ಘೋಷಣೆಗಳನ್ನು ಕೂಗಿ, ಅವರಿದ್ದ ಕಾರನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಿದ್ದರು.
ಇಡೀ ರಾಜ್ಯದ ಜವಾಬ್ದಾರಿಯನ್ನು ಹೊತ್ತಿರುವ ಪಕ್ಷದ ಮುಖ್ಯಸ್ಥರು ಸಂಸದರಾಗಿ ತಮ್ಮ ಕ್ಷೇತ್ರದಲ್ಲಿ ಪಕ್ಷದ ಕೆಲಸಗಳಿಗೆ ಯಾವಾಗಲೂ ಸ್ಥಳೀಯವಾಗಿ ಲಭ್ಯವಿರುವುದಿಲ್ಲ ಎಂದು ಮಾಜಿ ಎಂಎಲ್ ಸಿ ಗೋ ಮಧುಸೂದನ್ (GoMadhusudhan)ಹೇಳಿದ್ದಾರೆ.
ಇದನ್ನೂ ಓದಿ : ನಳೀನ್ ಕುಮಾರ್ ಕಟೀಲ್ ಕುಹಕಕ್ಕೆ ಬಟ್ಟೆಯಲ್ಲೇ ತಿರುಗಿಸಿ ಕೊಟ್ಟ ಸಿದ್ದರಾಮಯ್ಯ..!
ಒಟ್ಟಾರೆ, ಪ್ರಧಾನಿ ಮೋದಿ ಕರಾವಳಿಗೆ ಭೇಟಿ ನೀಡುವ ವೇಳೆಗ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ನಳೀನ್ ಕುಮಾರ್ ಕಟೀಲ್ ಕೆಳಗಿಳಿಯಬೇಕು. ಆ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯ ಕಡೆಗೆ ಅವರು ಗಮನವಹಿಸಬೇಕು ಎಂದು ಆ ಭಾಗದ ಕಾರ್ಯಕರ್ತರ ಆಕ್ರೋಶವಾಗಿದೆ.