ಭಾರತೀಯ ಆಹಾರ ನಿಗಮದಲ್ಲಿ (FCI Jobs) ಖಾಲಿಯಿರುವ 113 ಮ್ಯಾನೇಜರ್ ಕೆಟಗರಿ 2 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಆಯ್ಕೆಯಾದ ಅಭ್ಯರ್ಥಿಗಳು ಮೊದಲ 6 ತಿಂಗಳು ತರಬೇತಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಬೇಕು. ಅನಂತರ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಬಹುದಾಗಿದೆ.
ಭಾರತೀಯ ಆಹಾರ ನಿಗಮದಲ್ಲಿನ (FCI Jobs) 113 ಮ್ಯಾನೇಜರ್ ಕೆಟಗರಿ 2 ಹುದ್ದೆಗಳಿಗೆ ಇದೇ ಅಗಸ್ಟ್ 27 ರಿಂದ ಅರ್ಜಿ ಸಲ್ಲಿಸಬಹುದಾಗಿದೆ. ಸೆಪ್ಟಂಬರ್ 26 ಕೊನೆಯ ದಿನಾಂಕವಾಗಿದೆ. ಇಚ್ಚಿಸುವ ಅಭ್ಯರ್ಥಿಗಳು ನಿಗಮದ ಅಧಿಕೃತ ವೆಬ್ಸೈಟ್ https://fci.gov.in/ ಗೆ ಭೇಟಿ ನೀಡಬಹುದು.
ದೇಶದ 5 ಜೋನ್ಗಳಲ್ಲಿನ 113 ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳನ್ನು ಜೆನೆರಲ್, ಡಿಪೋಟ್, ಟೆಕ್ನಿಕಲ್, ಸಿವಿಲ್ ಇಂಜೀನಿಯರ್, ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ ವಿಭಾಗಗಳಲ್ಲಿ ವಿಭಜಿಸಲಾಗಿದೆ.
ಹುದ್ದೆಯ ಹೆಸರು : ಮ್ಯಾನೇಜರ್ ಗ್ರೇಡ್ 2
ಒಟ್ಟು ಹುದ್ದೆಗಳ ಸಂಖ್ಯೆ : 113
- ಉತ್ತರ ವಿಭಾಗದಲ್ಲಿ 11 ಹುದ್ದೆಗಳು
- ದಕ್ಷಿಣ ವಿಭಾಗದಲ್ಲಿ 16 ಹುದ್ದೆಗಳು
- ಪಶ್ಚಿಮ ವಿಭಾಗದಲ್ಲಿ 20 ಹುದ್ದೆಗಳು
- ಪೂರ್ವ ವಿಭಾಗದಲ್ಲಿ 21 ಹುದ್ದೆಗಳು
- ಈಶಾನ್ಯ ವಿಭಾಗದಲ್ಲಿ 18 ಹುದ್ದೆಗಳು
ಸಂಬಳ : 40 ಸಾವಿರದಿಂದ 1,40,000 ದ ವರೆಗೆ
ವಿದ್ಯಾರ್ಹತೆ : ಆಯಾ ವಿಭಾಗಗಳಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
ವಯಸ್ಸಿನ ಮಿತಿ : ಹಿಂದಿ ಮ್ಯಾನೇಜರ್ ಹುದ್ದೆಗೆ ವಯಸ್ಸು 25, ಇತರೆ ಹುದ್ದೆಗಳಿಗೆ 28 ವರ್ಷ.
ಅರ್ಜಿ ಶುಲ್ಕ : 800 ರೂ.ಗಳು ( ಎಸ್ಸಿ,ಎಸ್ಟಿ,ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ )
ಹುದ್ದೆಯ ಆಯ್ಕೆಯ ಪ್ರಕ್ರಿಯೆ : ಆನ್ಲೈನ್ ಮೂಲಕ ಪರೀಕ್ಷೆ, ಸಂದರ್ಶನ ಮತ್ತು ತರಬೇತಿ ( ಆನ್ಲೈನ್ ಪರೀಕ್ಷೆ ಎರಡು ಹಂತಗಳಲ್ಲಿ ನಡೆಯುತ್ತದೆ).
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಖ : ಅಗಸ್ಟ್ 27
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟಂಬರ್ 26
ಪರೀಕ್ಷಾ ದಿನಾಂಕ : ಡಿಸೆಂಬರ್ 2022
ಅರ್ಜಿ ಸಲ್ಲಿಸುವುದು ಹೇಗೆ : ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ನಿಗಮದ ಅಧಿಕೃತ ವೆಬ್ಸೈಟ್ https://fci.gov.in/ ಗೆ ಭೇಟಿ ಅಪ್ಲೈ ಆನ್ಲೈನ್ ಮೇಲೆ ಕ್ಲಿಕ್ ಮಾಡುವ ಮೂಲಕ ಅರ್ಜಿ ಪ್ರಕ್ರಿಯೆ ಆರಂಭಿಸಬೇಕು. ನೋಟಿಫಿಕೇಶನ್ ಅನ್ನು ಇಲ್ಲಿ ಡೌನ್ಲೋಡ್ ಮಾಡಬಹುದು. https://www.recruitmentfci.in/assets/current_category_II/Advt.%20No.02-2022-FCI%20Category-II.pdf