ಇಂದು ಶನಿವಾರ ಏಷ್ಯಾ ಕಪ್ (Asia Cup 2022)ಗೆ ಅದ್ದೂರಿ ಚಾಲನೆ ದೊರಕಿದೆ. ಭಾನುವಾರ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನದ ನಡುವೆ (INDvPAK) 2 ನೇ ಪಂದ್ಯ ನಡೆಯಲಿದ್ದು, ಕ್ರೀಡಾಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.
ಇಂದು ಶನಿವಾರದ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ಮುಖಾಮುಖಿಯಾಗಲಿವೆ. ಭಾನುವಾರ ಭಾರತ, ಪಾಕಿಸ್ತಾನದ ಪಂದ್ಯ (INDvPAK) ನಡೆಯಲಿದೆ. ಕಳೆದ ವರ್ಷ ನಡೆದಿದ್ದ ಟಿ-20 ವಿಶ್ವಕಪ್ನಲ್ಲಿನ ಪಾಕಿಸ್ತಾನದ ವಿರುದ್ಧ ಸೋತಿದ್ದ ಭಾರತ ತಂಡ ಸೇಡು ತೀರಿಸಿಕೊಳ್ಳುತ್ತಾ ಎಂಬ ಕುತೂಹಲ ಗರಿಗೆದರಿದೆ.
ಸೇಡು ತೀರಿಸಿಕೊಳ್ಳುತ್ತಾ ಭಾರತ :
ಭಾರತ ಮತ್ತು ಪಾಕಿಸ್ತಾನದ ಕ್ರಿಕೇಟ್ ತಂಡಗಳು ಕಳೆದ ಟಿ-20 ವಿಶ್ವವಕಪ್ ಬಿಟ್ಟರೆ ಮತ್ತೆಲ್ಲಿಯೂ ಮುಖಾಮುಖಿಯಾಗಿಲ್ಲ. ಸಾಂಪ್ರದಾಯಿಕ ಎದುರಾಳಿಯಾದ ಪಾಕಿಸ್ತಾನದ ತಂಡದ ವಿರುದ್ಧಸ ಸೋಲು ಭಾರತ ತಂಡಕ್ಕೆ ಅವಮಾನವಾಗಿಯೇ ಮಾರ್ಪಟ್ಟಿತ್ತು. ಇದೀಗ, ಸಾಮಾಜಿಕ ಜಾಲತಾನಗಳಲ್ಲಿ ಭಾರತೀಯ ಕ್ರಿಕೇಟ್ ತಂಡದ ಅಭಿಮಾನಿಗಳು ಕಳೆದ ವರ್ಷದ ಸೋಲಿಗೆ ಸೇಡು ತೀರಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ : Asia Cup 2022 : ಏಷ್ಯಾ ಕಪ್ಗೆ ಅದ್ದೂರಿ ಚಾಲನೆ : ಅಫ್ಘನ್ – ಲಂಕಾ ಮುಖಾಮುಖಿ
ಭಾರತ ಬಲಾಬಲ :
ಕಳೆದ ವರ್ಷದ ಪಂದ್ಯದಲ್ಲಿ ಭಾರತದ ತಂಡದ ನಾಯಕತ್ವ ವಿರಾಟ್ ಕೊಹ್ಲಿ ವಹಿಸಿಕೊಂಡಿದ್ದರು. ಆಕಡೆಯಿಂದ ಬಾಬರ್ ಅಜಾಮ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದ ತಂಡದ ಸಾಮರ್ಥ್ಯ ಮತ್ತಷ್ಟು ವೃದ್ಧಿಗೊಂಡಿದೆ. ತಂಡದ ನಾಯಕತ್ವ ರೋಹಿತ್ ಕೈ ಸೇರಿದೆ. ಅಲ್ಲದೇ, ಸಮರ್ಥ ಆಟಗಾರರಾದ ಹಾರ್ಧಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ತಂಡ ಸೇರಿಕೊಂಡಿದ್ದು ತಂಡಕ್ಕೆ ಆತ್ಮವಿಶ್ವಾಸ ಮರಳಿದೆ. ಅಲ್ಲದೇ, ಯುವ ಬೌಲರ್ಗಳು ತಂಡ ಸೇರಿಕೊಂಡಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನದ ತಂಡ ಒಂದೇ ಬಾರಿ ಆಸ್ಟ್ರೇಲಿಯಾ ತಂಡದ ವಿರುದ್ಧ ಟಿ-20 ಪಂದ್ಯವಾಡಿದ್ದಾರೆ. ಭಾರತದ ಆಟಗಾರರು ಐಪಿಎಲ್ ನಂತರ ವಿವಿಧ ದೇಶಗಳೊಂದಿಗೆ 15 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಭಾರತದ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕಳೆದ ಕೆಲ ತಿಂಗಳುಗಳಿಂದ ಫಾರ್ಮ್ ಕಳೆದುಕೊಂಡಿದ್ದಾರೆ. ಕೆಲ್ ರಾಹುಲ್ ಗಾಯದ ಸಮಸ್ಯೆಯಿಂದ ಇದೀಗ ತಂಡಕ್ಕೆ ಮರಳಿದ್ದಾರೆ.
ಪಾಕಿಸ್ತಾನ ತಂಡದ ಬಲಾಬಲ :
ಪಾಕಿಸ್ತಾನ ತಂಡದಲ್ಲಿ ನಾಯಕ ಬಾಬರ್ ಅಜಮ್ ಸಮರ್ಥವಾಗಿ ಆಟವಾಡುತ್ತಿದ್ದಾರೆ. ಅಲ್ಲದೇ, ತಂಡವನ್ನು ಉತ್ತಮವಾಗಿ ಮುನ್ನಡೆಸುವ ಸಾಮರ್ಥ್ಯ ಅವರಲ್ಲಿದೆ. ಬಾಬರ್ ಅಜಮ್ ಜೊತೆಗೆ ಮೊಹಮ್ಮದ್ ರಿಜ್ವಾನ್ ಟಿ-20 ಫಾರ್ಮ್ನಲ್ಲಿ ಅತ್ಯುತ್ತಮವಾಗಿ ಮುಂಚುತ್ತಿದ್ದಾರೆ. ಬೌಲರ್ಗಳ ತಂಡವೂ ಸಮರ್ಥವಾಗಿದ್ದು, ಪ್ರಸ್ತುತ ಏಷ್ಯಾದ ಉತ್ತಮ ಬೌಲಿಂಗ್ ಫಾರ್ಮ್ ಪಾಕಿಸ್ತಾನದಲ್ಲಿದೆ.
ಆರಂಭಿಕ ಪಂದ್ಯದಲ್ಲಿ ಉತ್ತಮ ಬೌಲರ್ ಶಾಹಿನ್ ಆಫ್ರಿದಿಯವರ ಅನುಪಸ್ಥಿತಿ ಪಾಕಿಸ್ತಾನ ತಂಡಕ್ಕೆ ಕಾಡಲಿದೆ. ಕಡಿಮೆ ಅನುಭವಿ ಆಟಗಾರರ ತಂಡ ಮತ್ತು ಇನ್ನಿಂಗ್ಸ್ ಉಳಿಸಿಕೊಳ್ಳಲು ಅಗ್ರ ಕ್ರಮಾಂಕದ ಆಟಗಾರರ ಮೇಲೆ ತುಂಬಾ ಒತ್ತಡ ಇರುವುದು ಪಾಕಿಸ್ತಾನ ತಂಡದ ದೌರ್ಬಲ್ಯಗಳಾಗಿವೆ.
ಎರಡೂ ತಂಡಗಳ ಸಾಮರ್ಥ್ಯ ನೋಡಿದಾಗ ಭಾನುವಾರ ಗೆಲ್ಲುವ ಪೇವರೇಟ್ ತಂಡವಾಗಿ ಭಾರತ ಹೊರಹೊಮ್ಮಿದೆ.
ಇದನ್ನೂ ಓದಿ : Asia Cup 2022 : ಮಧ್ಯಂತರ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಆಯ್ಕೆ