ಸಂಸದೆ ಸುಮಲತಾ ಅಂಬರೀಶ್ರ ಹುಟ್ಟುಹಬ್ಬದ ಪ್ರಯುಕ್ತ ಇಂದು ಅಭಿಷೇಕ್ ಅಂಬರೀಷ್ ನಟನೆಯ AA04 ಚಿತ್ರದ (AA04 Film) ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಅಂಬಿ ಪುತ್ರ ಅಭಿಯವರ AA04 ಚಿತ್ರದ (AA04 Film) ಫಸ್ಟ್ ಪೋಸ್ಟರ್ ಅಧ್ಭುತವಾಗಿ ಮೂಡಿಬಂದಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.
ಇಂದು ಕಂಠೀರವ ಸ್ಟುಡಿಯೋದಲ್ಲಿ ಅಭಿಯವರ ನೂತನ ಚಿತ್ರದ ಪೋಸ್ಟರ್ನ್ನು ಸುಮಲತಾ ಅವರು ಬಿಡುಗಡೆ ಮಾಡಿದರು.
AA04 ಚಿತ್ರವನ್ನು ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡಲಿದ್ದಾರೆ. ‘ಮದಗಜ’ ಖ್ಯಾತಿಯ ಮಹೇಶ್ ಕುಮಾರ್ ಚಿತ್ರದ ನಿರ್ದೇಶನ ಮಾಡಲಿದ್ದಾರೆ. ರವಿ ಬಸ್ರೂರು ಸಂಗೀತ ಈ ಚಿತ್ರಕ್ಕಿರಲಿದೆ. ಚಿತ್ರದ ತಾರಾಗಣ ಇನ್ನಷ್ಟೇ ತಿಳಿದುಬರಬೇಕಿದೆ.