ಏಷ್ಯಾ ಕಪ್ (Asia Cup) ನಲ್ಲಿ ಟೀಮ್ ಇಂಡಿಯಾ (Team India) ಮತ್ತು ಪಾಕಿಸ್ತಾನ (Pakistan) ಒಟ್ಟು 14 ಬಾರಿ ಮುಖಾಮುಖಿ ಆಗಿವೆ. 8 ಕ್ರಿಕೆಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆದ್ದಿದ್ದರೆ, ನಾಲ್ಕು ಬಾರಿ ಪಾಕ್ ಜಯ ಗಳಿಸಿದೆ. ಒಂದು ಪಂದ್ಯ ರದ್ದಾಗಿದೆ.
1984ರಲ್ಲಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ 54 ರನ್ ಗಳ ಅಂತರದಿಂದ ಗೆಲುವಿನ ಪತಾಕೆ ಹಾರಿಸಿತ್ತು.
1988ರಲ್ಲಿ ನಡೆದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ದೇಶದ ವಿರುದ್ಧ ಟೀಮ್ ಇಂಡಿಯಾ ನಾಲ್ಕು ವಿಕೆಟ್ ಗಳ ಅಂತರದಿಂದ ಜಾಯಿಸಿತ್ತು.
1997ರಲ್ಲಿ ಮಳೆ ಕಾರಣ ಟೀಮ್ ಇಂಡಿಯಾ ಮತ್ತು ಪಾಕ್ ನಡುವಿನ ಪಂದ್ಯ ರದ್ದಾಗಿತ್ತು.
2000ರಲ್ಲಿ ಬಾಂಗ್ಲಾದಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ್ 44 ರನ್ ಅಂತರದಿಂದ ಗೆಲುವು ಸಾಧಿಸಿತ್ತು.
2008ರಲ್ಲಿ ಪಾಕಿಸ್ತಾನದಲ್ಲಿ ನಡೆದ ಟೂರ್ನಿಯಲ್ಲಿ ಎರಡು ಬಾರಿ ಟೀಮ್ ಇಂಡಿಯಾ – ಪಾಕಿಸ್ತಾನ್ ಮುಖಾಮುಖಿ ಆಗಿದ್ದವು. ಎರಡು ತಂಡಗಳು ತಲಾ ಒಂದರಲ್ಲಿ ಜಯ ಗಳಿಸಿದ್ದವು.
2012ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾ ಕಪ್ ನಲ್ಲಿ ದಾಯಾದಿ ದೇಶ ಪಾಕ್ ವಿರುದ್ಧ ಟೀಮ್ ಇಂಡಿಯಾ 6 ವಿಕೆಟ್ ಅಂತರದಿಂದ ವಿಜಯಿಯಾಗಿತ್ತು.
2016ರಲ್ಲಿ ಏಕದಿನ ಬದಲು ಟಿ -20 ಫಾರ್ಮ್ಯಾಟ್ ನಲ್ಲಿ ಏಷ್ಯಾ ಕಪ್ ನಡೆಸಲಾಗಿತ್ತು. ಪಾಕ್ ವಿರುದ್ದ ಐದು ವಿಕೆಟ್ ಅಂತರದಲ್ಲಿ ಭಾರತ ತಂಡ ಗೆಲುವಿನ ಪತಾಕೆ ಹಾರಿಸಿತ್ತು.
2018ರಲ್ಲಿ ಯುಎಇ ಯಲ್ಲಿ ನಡೆದ ಟೂರ್ನಿಯಲ್ಲಿ ಎರಡು ಬಾರಿ ಟೀಮ್ ಇಂಡಿಯಾ – ಪಾಕಿಸ್ತಾನ್ ಮುಖಾಮುಖಿ ಆಗಿದ್ದವು. ಎರಡು ಬಾರಿಯೂ ಗೆದ್ದಿದ್ದು ಟೀಮ್ ಇಂಡಿಯಾ.