ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯ ಚುಟುಕು ಕದನದಲ್ಲಿ ದಾಯಾದಿ ದೇಶ ಪಾಕಿಸ್ತಾನ (Pakistan)ವಿರುದ್ಧ ಟೀಮ್ ಇಂಡಿಯಾ (Team India)ರೋಚಕ ಗೆಲುವು (Win)ಸಾಧಿಸಿದೆ.
ಈ ಮೂಲಕ ಕಳೆದ ವರ್ಷ ಟಿ-20 ವಿಶ್ವಕಪ್ ನಲ್ಲಿ ಪಾಕ್ ಕೊಟ್ಟಿದ್ದ ಹೊಡೆತಕ್ಕೆ ಈಗ ರೋಹಿತ್ ಶರ್ಮ (Rohit Sharma)ಪಡೆ ಪ್ರತಿಕಾರ ತೀರಿಸಿಕೊಂಡಂತೆ ಆಗಿದೆ.
ಪಾಕ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಐದು ವಿಕೆಟ್ ಗಳ ಅಂತರದಲ್ಲಿ ಗೆಲುವು ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಪಾಕ್ ತಂಡವನ್ನು 147 ರನ್ ಗಳಿಗೆ ಟೀಮ್ ಇಂಡಿಯಾ ನಿಯಂತ್ರಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ರೋಹಿತ್ ಪಡೆ ಇನ್ನೂ ಎರಡು ಎಸೆತ ಇರುವಂತೆಯೇ ಐದು ವಿಕೆಟ್ ಅಂತರದಿಂದ ಗೆಲುವಿನ ನಗಾರಿ ಬಾರಿಸಿತು.
ಬ್ಯಾಟರ್ ಹಾರ್ದಿಕ್ ಪಾಂಡ್ಯಾ (Hardik paandya) (ಅಜೇಯ 33 ರನ್ )ಸಿಕ್ಸ್ ಹೊಡೆಯುವ ಮೂಲಕ ಪಂದ್ಯವನ್ನು ಗೆಲ್ಲಿಸಿದರು.
ಇದಕ್ಕೂ ಮೊದಲು ವಿರಾಟ್ ಕೊಹ್ಲಿ (Virat kohli) 35 ರನ್, ರವೀಂದ್ರ ಜಡೇಜಾ (Ravindra jadeja )35 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.