ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಹೈಕೋರ್ಟ್ ನಿರ್ಬಂಧ ವಿಧಿಸಿಲ್ಲ.
ಕೆಲವೊಂದು ಷರತ್ತು ವಿಧಿಸಿ ಅನುಮತಿ ನೀಡಿದೆ. ಇದು ಪೂಜಾ ಸ್ಥಳ ಅಲ್ಲ, ಬದಲಿಗೆ ಇಲ್ಲಿ ವಾಹನ ನಿಲುಗಡೆ ಸೇರಿದಂತೆ ಇತರೆ ಚುಟುವಟಿಕೆ ನಡೆಸಲಾಗ್ತಿದೆ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಸುಪ್ರೀಂ ಕೋರ್ಟ್ ತ್ರೀ ಸದಸ್ಯ ಪೀಠದ ಆದೇಶದ ಬೆನ್ನೆಲೆ ಅಂಜು ಮನ್ ಸಮಿತಿ ಹೈಕೋರ್ಟ್ ಮೆಟಲೇರಿತ್ತು.
ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಅನುಮತಿ ನೀಡಿದ್ದರು.