ಪೋಕ್ಸೋ ಪ್ರಕರಣದಲ್ಲಿ ಬಂಧನವಾಗಿ ಕಳೆದ ರಾತ್ರಿ ಚಿತ್ರದುರ್ಗ ಜೈಲು ಸೇರಿದ್ದ ಮುರುಘಾ ಮಠದ ಶಿವಮೂರ್ತಿ ಶ್ರೀಗಳನ್ನು ಎದೆ ನೋವಿನ ನೆಪದಲ್ಲಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇಲ್ಲಿ ಗಮನಿಸಬೇಕಾದ ವಿಚಾರ ಎಂದರೇ ಎದೆ ನೋವು ಬಂದಿದೆ ಎನ್ನಲಾದ ಸ್ವಾಮೀಜಿಯನ್ನು ಪೊಲೀಸ್ ವ್ಯಾನ್ ನಲ್ಲಿ ಜೈಲಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಶ್ರೀಗಳು ಆಸ್ಪತ್ರೆಯೊಳಕ್ಕೆ ಆರಾಮಾಗಿ ಯಾರ ನೆರವು ಇಲ್ಲದೇ ನಡೆದುಕೊಂಡು ಹೋಗಿದ್ದಾರೆ. ನಿನ್ನೆ ರಾತ್ರಿ ಅವರು ಜೈಲು ಸೇರುವಾಗ ನಡಿಗೆಯ ಧಾಟಿ ಹೇಗಿತ್ತೋ ಅದೇ ಧಾಟಿ ಆಸ್ಪತ್ರೆಯೊಳಗೆ ನಡೆದುಕೊಂಡು ಹೋಗುವಾಗಲೂ ಕಂಡು ಬಂದಿದೆ.
ಸಾಮಾನ್ಯವಾಗಿ ಎದೆ ನೋವು ಬಂದರೆ ದೇಹ ಸ್ಥಿತಿ ಬದಲಾಗುತ್ತದೆ. ತೀವ್ರ ಸ್ವರೂಪದ ಕಾಯಿಲೆ ಇದ್ದಲ್ಲಿ ಮಾತ್ರ ಜೈಲಿಂದ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಶಿಫ್ಟ್ ಮಾಡಲಾಗುತ್ತದೆ. ಆಂಬುಲೆನ್ಸ್ ಇಲ್ಲದ ತುರ್ತು ಸಂದರ್ಭದಲ್ಲಿ ವ್ಯಾನ್ ಕೂಡ ಬಳಸಬಹುದು. ಅದನ್ನು ಇಲ್ಲ ಎನ್ನಲಾಗಲ್ಲ. ಇದನ್ನೆಲ್ಲ ನೋಡುತ್ತಿದ್ದರೇ ಪ್ರಹಸನ ಏನಿಸದೆ ಇರದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಅಂದ ಹಾಗೆ, ಶ್ರೀಗಳ ಬಂಧನಕ್ಕೂ ಮುನ್ನವೇ, ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಸ್ವಾಮೀಜಿಗೆ ಸ್ಪೆಷಲ್ ವಾರ್ಡ್ ಸಿದ್ದಪಡಿಸಲಾಗಿತ್ತು.