ವಾಟ್ಸಪ್ (WhatsApp)ಗ್ರೂಪ್ ಅಡ್ಮಿನ್ಗಳು (Group Admin)ಎಷ್ಟೋ ದಿನಗಳಿಂದ ಕಾಯುತ್ತಿದ್ದ ಫೀಚರ್ ಬಳಕೆದಾರರಿಗೆ ಲಭ್ಯವಾಗಿದೆ. ಇದರೊಂದಿಗೆ ವಾಟ್ಸಪ್ ಗ್ರೂಪ್ಗಳ ಮೇಲೆ ಅಡ್ಮಿನ್ಗಳು ಇನ್ನಷ್ಟು ಹಿಡಿತ ಸಾಧಿಸಲಿದ್ದಾರೆ.
ಇಷ್ಟು ದಿನ ವಾಟ್ಸಪ್ ಗ್ರೂಪ್ಗಳ ಸದಸ್ಯರು ಯಾವುದಾದರೂ ಮೆಸೆಜ್ ಪೋಸ್ಟ್ (Post)ಮಾಡಿದಲ್ಲಿ, ಷೇರ್ (Share)ಮಾಡಿದಲ್ಲಿ ಅದನ್ನು ಡಿಲೀಟ್ (Delete)ಮಾಡುವ ಅವಕಾಶ ಪೋಸ್ಟ್ ಮಾಡಿದವರಿಗಷ್ಟೇ ಇತ್ತು.
ಆದರೆ, ವಾಟ್ಸಪ್ ಹೊಸ ಫೀಚರ್ನಲ್ಲಿ (New Feature)ಅಡ್ಮಿನ್ಗೆ ಆ ಆಕ್ಷೇಪಾರ್ಹ ಪೋಸ್ಟ್ ತೆಗೆಯಲು ಅವಕಾಶ ಇರಲಿದೆ.
ಸದ್ಯ ಈ ಫೀಚರ್ ಆಂಡ್ರಾಯ್ಡ್ (Android)ಬಳಕೆದಾರರಿಗೆ ಮಾತ್ರ ಲಭ್ಯ ಇದೆ. ಶೀಘ್ರವೇ ಇದನ್ನು ಐಓಸ್ (IOS)ಬಳಕೆದಾರರಿಗೆ ಲಭ್ಯ ಆಗುವಂತೆ ವಾಟ್ಸಪ್ ಮಾಡಲಿದೆ.
ಗ್ರೂಪ್ ಸದಸ್ಯರು ಪೋಸ್ಟ್ ಮಾಡಿದ ಅಥವಾ ಷೇರ್ ಮಾಡಿದ ಮೆಸೇಜ್ನ್ನು ಅಡ್ಮಿನ್ ಸೆಲೆಕ್ಟ್ ಮಾಡಿದಲ್ಲಿ ಚಾಟ್ ಪೇಜ್ (Chat Page)ಮೇಲೆ ಡಿಲೀಟ್ ಆಪ್ಶನ್ ಕಾನಿಸುತ್ತದೆ.
ಅದರಲ್ಲಿ ಡಿಲೀಟ್ ಫಾರ್ ಎವೆರಿವನ್(Delete for Everyone), ಡಿಲೀಟ್ ಫಾರ್ ಮೀ(Delete for me ), ಕ್ಯಾನ್ಸಲ್ (Cancel) ಎಂಬ ಮೂರು ಆಪ್ಶನ್ ಕಾಣಿಸುತ್ತವೆ. ಅದರಲ್ಲಿನ ಡಿಲೀಟ್ ಫಾರ್ ಎವೆರಿವನ್ ಸೆಲೆಕ್ಟ್ ಮಾಡಿ ಪ್ರೆಸ್ ಮಾಡಿದಲ್ಲಿ ಆ ಮೆಸೇಜ್ ಗ್ರೂಪ್ನಿಂದ ಡಿಲೀಟ್ ಆಗುತ್ತದೆ.
ವಾಟ್ಸಪ್ನ ಹೊಸ ಫೀಚರ್ನಿಂದ ಆಕ್ಷೇಪಾರ್ಹ ಪೋಸ್ಟ್ಗಳು, ನಕಲಿ ಸುದ್ದಿಗಳ ಹಬ್ಬುವಿಕೆಯನ್ನು ತಡೆಯಬಹುದು ಎಂದು ವಾಟ್ಸಪ್ ಸಂಸ್ಥೆ ತಿಳಿಸಿದೆ.
ಅಷ್ಟೇ ಅಲ್ಲ, ಹೊಸದಾಗಿ ಪ್ರೈವೆಸಿ ಫೀಚರ್ (Privacy Feature)ಅನ್ನು ಕೂಡ ವಾಟ್ಸಪ್ ಪರಿಚಯಿಸಿದೆ.ಗ್ರೂಪ್ ಸದಸ್ಯರಾಗಿ ಮುಂದುವರೆಯುವುದು ಇಷ್ಟವಿಲ್ಲದೇ ಇದ್ದಲ್ಲಿ ಇತರರಿಗೆ ಗೊತ್ತಾಗದಂತೆ ಗ್ರೂಪ್ನಿಂದ ಲೆಫ್ಟ್ (Left)ಆಗಬಹುದಾಗಿದೆ.
ವಾಟ್ಸಪ್ ಗ್ರೂಪ್ ಅಡ್ಮಿನ್ಗಳಿಗೆ ಮಾತ್ರ ಯಾರು ಗ್ರೂಪ್ನಿಂದ ಲೆಫ್ಟ್ ಆಗಿದ್ದಾರೆ ಎಂಬುದು ಗೊತ್ತಾಗುತ್ತದೆ.
ಇನ್ನೂ ಒಂದು ಹೊಸ ಫೀಚರ್ ಇದೆ. ಆನ್ಲೈನ್ನಲ್ಲಿ ಚಾಟ್ ಮಾಡುತ್ತಿರುವಾಗ ಬೇರೊಬ್ಬರಿಗೆ ಬರುವ ಮೆಸೇಜ್ಗಳಿಗೆ ರೀಪ್ಲೇ ಕೊಡುವುದು ಇಷ್ಟವಿಲ್ಲದಿದ್ದರೇ, ನೀವು ಆನ್ಲೈನ್ನಲ್ಲಿ ಇರುವುದು ತಿಳಿಯದಂತೆ ಸ್ಟೇಟಸ್ ಹೈಡ್ (Online status Hide)ಮಾಡಬಹುದು.
ವ್ಯೂವನ್ ಫೀಚರ್ ಮೂಲಕ ಕಳಿಸುವ ಫೋಟೋ/ಫೈಲ್ನ್ನು ಸ್ಕ್ರೀನ್ ಶಾಟ್ ತೆಗೆದುಕೊಳ್ಳುವ ಫೀಚರ್ ಅನ್ನು ತೊಲಗಿಸಿದೆ.
ಡಿಸಪ್ಪಿಯರಿಂಗ್ ಮೆಸೇಜ್ ಟೈಮ್ ಲಿಮಿಟ್ ಅನ್ನು ಕೂಡ ಎರಡು ದಿನಗಳಿಗೆ ವಿಸ್ತರಿಸಿದೆ