ಕೆಂಪುಕೋಟೆ ಮೇಲೆ ಅಮೃತ ಸ್ವಾತಂತ್ರ್ಯ ಮಹೋತ್ಸವ ಆಚರಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಭಾಷಣದ ವೇಳೆ ಪ್ರಮುಖವಾಗಿ ಪ್ರಸ್ತಾಪಿಸಿದ್ದು ನಾರಿ ಶಕ್ತಿ ಬಗ್ಗೆ. ಮಹಿಳೆಯರಿಗೆ ಗೌರವ ನೀಡಬೇಕು ಎಂಬುದನ್ನು ಒತ್ತಿ ಹೇಳಿದ್ದರು.
ಇದಾಗಿ 20ದಿನವೂ ಕಳೆದಿಲ್ಲ. ಸಮಸ್ಯೆ ಹೇಳಿಕೊಳ್ಳಲು ಬಂದ ಮಳೆ ಸಂತ್ರಸ್ತೆ ಮೇಲೆ ಮಾಜಿ ಮಂತ್ರಿ, ಬಿಜೆಪಿಯ ಹಿರಿಯ ಶಾಸಕ ಅರವಿಂದ್ ಲಿಂಬಾವಳಿ ದರ್ಪ ಮೆರೆದಿದ್ದಾರೆ. ಅರವಿಂದ ಲಿಂಬಾವಳಿಯವರ ವರ್ತನೆಗೆ ಸಾರ್ವಜನಿಕವಾಗಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಆಗಿದ್ದೇನು??
ಇತ್ತೀಚಿಗೆ ಉಂಟಾದ ಭಾರೀ ವರ್ಷಧಾರೆ ಕಾರಣ ಮಹದೇವಪುರ ವಲಯ ಅತೀ ಹೆಚ್ಚು ಸಮಸ್ಯೆ ಎದುರಿಸಿದೆ. ಇದಕ್ಕೆ ಶಾಸಕ ಅರವಿಂದ ಲಿಂಬಾವಳಿ ಸ್ಪಂದಿಸಿಲ್ಲ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ, ಟೀಕೆ ಯನ್ನು ನೆಟ್ಟಿಗರು ಮಾಡಿದ್ದರು. ಪ್ರಧಾನಮಂತ್ರಿವರೆಗೂ ದೂರು ಹೋಗಿದೆ.
ಬಹುಷಃ ಇದೆಲ್ಲದರ ಒತ್ತಡದಲ್ಲಿ ಅರವಿಂದ್ ಲಿಂಬಾವಳಿ ಮಳೆ ಹಾನಿ ಪ್ರದೇಶಗಳಿಗಳ ಪರಿಶೀಲನೆಗೆಂದು ವರ್ತೂರು ಕೆರೆ ಕೋಡಿ ಬಳಿ ಹೋಗಿದ್ದರು. ಈ ಸಂದರ್ಭದಲ್ಲಿ ಮೇರಿ ಸಾಗಾಯಿ ಎಂಬ ಮಹಿಳೆ ತಮ್ಮ ಸಮಸ್ಯೆ ಹೇಳಿಕೊಂಡು ಮನವಿ ಪತ್ರ ಕೊಡಲು ಮುಂದಾಗಿದ್ದಾರೆ. ಇಷ್ಟಕ್ಕೆ ಸಿಟ್ಟಿಗೆದ್ದ ಶಾಸಕರು ಮಹಿಳೆ ಎನ್ನುವುದನ್ನು ನೋಡದೇ ಏಕವಚನದಲ್ಲಿ ನಿಂದಿಸಿದ್ದಾರೆ.
ಶಾಸಕ ಅರವಿಂದ ಲಿಂಬಾವಳಿ ಹೀಗೆ.. ಹೇಳಿದ್ದೆ ತಡ, ಇದನ್ನೇ ವೇದವಾಕ್ಯ ಎಂಬಂತೆ ವೈಟ್ ಫೀಲ್ಡ್ ಪೊಲೀಸರು ಮಳೆ ಸಂತ್ರಸ್ತಯನ್ನು ವಶಕ್ಕೆ ಪಡೆದು ಸಂಜೆ ಏಳು ಗಂಟೆಯವರೆಗೂ ಠಾಣೆಯಲ್ಲಿ ಇರಿಸಿಕೊಂಡು ಎಚ್ಚರಿಕೆ ನೀಡಿ ಕಳಿಸಿದ್ದಾರೆ ಎನ್ನಲಾಗಿದೆ.
ನಿಂಗೆ ಮಾನ ಮರ್ಯಾದೆ ಇದೆಯಾ, ನಾಚಿಕೆ ಆಗಲ್ವಾ ನಿಂಗೆ.. ಒತ್ತುವರಿ ಮಾಡಿಕೊಂಡಿದ್ದು ಅಲ್ಲದೆ, ನ್ಯಾಯ ಬೇಕು ಅಂತೀಯಾ.. ಒದ್ದು ಒಳಗೆ ಹಾಕ್ರಿ ಇವರನ್ನು ಎಂದು ಅವಾಜ್ ಹಾಕಿದ್ದಾರೆ. ನ್ಯಾಯವಾಗಿ ಮಾತಾಡಿ ಸರ್.. ಸರಿಯಾಗಿ ಮಾತನಾಡಿ ಸರ್ ಎಂದು ಆ ಮಹಿಳೆ ಕೇಳಿದ್ದಕ್ಕೆ, ಏಯ್ ನಂಗೆ ಬೇರೆ ಭಾಷೆ ಬರುತ್ತೆ.. ಒದ್ದು ಒಳಗೆ ಹಾಕ್ರಿ ಇವ್ರನ್ನ ಎಂದು ಆವೇಶದಿಂದ ಗುಡುಗಿದ್ದಾರೆ.
ಶಾಸಕ ಅರವಿಂದ ಲಿಂಬಾವಳಿ ಹೀಗೆ.. ಹೇಳಿದ್ದೆ ತಡ, ಇದನ್ನೇ ವೇದವಾಕ್ಯ ಎಂಬಂತೆ ವೈಟ್ ಫೀಲ್ಡ್ ಪೊಲೀಸರು ಮಳೆ ಸಂತ್ರಸ್ತಯನ್ನು ವಶಕ್ಕೆ ಪಡೆದು ಸಂಜೆ ಏಳು ಗಂಟೆಯವರೆಗೂ ಠಾಣೆಯಲ್ಲಿ ಇರಿಸಿಕೊಂಡು ಎಚ್ಚರಿಕೆ ನೀಡಿ ಕಳಿಸಿದ್ದಾರೆ ಎನ್ನಲಾಗಿದೆ.
ಶಾಸಕರ ವರ್ತನೆಯನ್ನು ಮಹದೇವಪುರ ಕ್ಷೇತ್ರದ ಆಮ್ ಅದ್ಮಿ ಪಾರ್ಟಿ ಅಧ್ಯಕ್ಷ ಅಶೋಕ್ ಮೃತ್ಯುಂಜಯ ಖಂಡಿಸಿದ್ದಾರೆ. ಅರವಿಂದ ಲಿಂಬಾವಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.