ಕೊರೋನಾ ನಿಯಂತ್ರಣಕ್ಕಾಗಿ ತೆಗೆದುಕೊಂಡ ಕೋವಿಶೀಲ್ಡ್ (Covishield vaccine) ಲಸಿಕೆಯಿಂದ ತನ್ನ ಪುತ್ರಿ ಸಾವನ್ನಪ್ಪಿದ್ದಾಳೆ. ಆ ಕಾರಣದಿಂದ ತನಗೆ 1000 ಕೋ.ರೂ ಪರಿಹಾರ ನೀಡಬೇಕು ಎಂದು ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಭಾರತ ಸರ್ಕಾರ, ಬಿಲ್ಗೇಟ್ಸ್ ಸೇರಿದಂತೆ ಇತರರಿಗೆ ನೋಟಿಎಸ್ ಜಾರಿ ಮಾಡಿ ಆದೇಶಿಸಿದೆ.
ದಿಲೀಪ್ ಲುನಾವತ್ ಎನ್ನುವವರು ತನ್ನ ಮಗಳು ಡಾ.ಸ್ನೇಹಲ್ ಲುನಾವತ್ ಕೋವಿಶೀಲ್ಡ್ ಲಸಿಕೆ (Covishield vaccine) ಪಡೆದ ಕಾರಣಕ್ಕೆ ಸಾವನ್ನಪ್ಪಿದ್ದಾರೆ. ಆದ್ದರಿಂದ ಈ ಸಾವಿಗೆ ಪರಿಹಾರವಾಗಿ 1000 ಕೋ.ರೂ ನೀಡಬೇಕೆಂದು ಬಾಂಬೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ : 2 ಡೋಸ್ ಕೊರೋನಾ ಲಸಿಕೆ ಪಡೆದವರಿಗೆ ಗ್ರೀನ್ ಪಾಸ್ ಕೊಡುವ ಚಿಂತನೆ- ಸಚಿವ ಡಾ.ಕೆ.ಸುಧಾಕರ್
ಈ ಅರ್ಜಿಯ ವಿಚಾರಣೆ ನಡೆಸಿದ ಘನ ನ್ಯಾಯಾಲಯ ಭಾರತ ಸರ್ಕಾರ, ಸೀರಮ್ ಇನ್ಸ್ಟಿಟ್ಯೂಟ್, ಬಿಲ್ ಗೇಟ್ಸ್, ಏಮ್ಸ್ ನಿರ್ದೇಶಕ, ಡಿಸಿಜಿಐ ಮುಖ್ಯಸ್ಥ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ.
ಕೊರೋನಾ ಲಸಿಕೆಯ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಸತ್ಯವನ್ನು ಮರೆಮಾಚಿದ್ದಾರೆ. ಅಲ್ಲದೇ, ಕೊರೋನಾ ಲಸಿಕೆ ನೀಡುವಂತೆ ವೈದ್ಯರ ಮೇಲೆ ಒತ್ತಡ ಹೇರಿದ್ದಾರೆ ಎಂದು ಭಾರತ ಸರ್ಕಾರ ಹಾಗೂ ಇತರರ ಮೇಲೆ ದಿಲೀಪ್ ಕುಮಾರ್ ಆರೋಪ ಮಾಡಿದ್ದಾರೆ.
ಇದನ್ನೂ ಓದಿ : ಕೊರೋನಾ ಲಸಿಕೆ ಹಾಕೋ ನೆಪದಲ್ಲಿ ಮನೆಗೆ ಬಂದು ದರೋಡೆ