ಯುಎಸ್ ಓಪನ್ನ ಮೂರನೇ ಸುತ್ತಿನಲ್ಲಿ ಸೋಲುವ ಮೂಲಕ ಅಮೆರಿಕದ ಖ್ಯಾತ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ (Serena Williams) ಇಂದು ಟೆನಿಸ್ ಆಟಕ್ಕೆ ವಿದಾಯ ಹೇಳಿದ್ದಾರೆ.
ಯುಎಸ್ ಓಪನ್ ಟೂರ್ನಿ ಆರಂಭಕ್ಕೂ ಮುನ್ನ ಈ ಟೂರ್ನಿಯ ಬಳಿಕ ನಿವೃತ್ತಿ ಘೋಷಿಸುವುದಾಗಿ ಹಿಂದೆಯೇ ಸೆರೆನಾ ಘೋಷಿಸಿದ್ದರು.
ಯುಎಸ್ ಓಪನ್ 3ನೇ ಸುತ್ತಿನಲ್ಲಿ ಆಸ್ಟ್ರೇಲಿಯಾದ ಆಜ್ಞಾ ಟೊಮಿಲ್ಲಾನೋವಿಕ್ ವಿರುದ್ಧ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದರು. ಇದರೊಂದಿಗೆ ವಿಶ್ವ ಟೆನಿಸ್ ಪ್ರಿಯರ ಮನಗೆದ್ದಿದ್ದ ಲೆಜೆಂಡ್ ಆಟಗಾರ್ತಿ ಭಾವುಕರಾಗಿ ಟೆನಿಸ್ ಅಂಗಳಕ್ಕೆ ಗುಡ್ಬೈ ಹೇಳಿದ್ದಾರೆ.
ಇದನ್ನೂ ಓದಿ : Breaking News : ಟೆನಿಸ್ಗೆ ವಿದಾಯ ಹೇಳಿದ ಸಾನಿಯಾ ಮಿರ್ಜಾ
24ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆಲ್ಲುವ ಕನಸಿನೊಂದಿಗೆ ಕಣಕ್ಕಿಳಿದಿದ್ದ 40ರ ಹರೆಯದ ಸೆರೆನಾ (Serena Williams) ಆಸ್ಟ್ರೇಲಿಯಾದ ಅಜ್ಞಾ ಟೊಮಿಲ್ಲಾನೋವಿಕ್ ವಿರುದ್ಧ ಬರೋಬ್ಬರಿ 3 ಗಂಟೆ 5 ನಿಮಿಷಗಳ ಕಾಲ ಹೋರಾಟ ನಡೆಸಿ ಕೊನೆಗೆ ಸೋಲೊಪ್ಪಿಕೊಂಡರು. ಮೊದಲ ಸೆಟ್ ಗೆದ್ದ ಸೆರೆನಾ ಬಳಿಕ ಎರಡು ಸೆಟ್ಗಳನ್ನು ಸತತವಾಗಿ ಸೋತು ಟೂರ್ನಿಗೆ ಗುಡ್ಬೈ ಘೋಷಿಸಿದ್ದಾರೆ.
ಟೆನಿಸ್ ಅಂಗಳದಲ್ಲಿ ಮಿಂಚಿನ ಪಾದ ಚಲನೆ ಮೂಲಕ ಅಗ್ರಗಣ್ಯ ಆಟಗಾರ್ತಿಯರನ್ನು ಸೋಲಿಸಿ ಸೆರೆನಾ ವಿಶ್ವದ ಗಮನಸೆಳೆದಿದ್ದರು. ತನ್ನ 27 ವರ್ಷಗಳ ವೃತ್ತಿಜೀವನದಲ್ಲಿ 23 ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿರುವ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಗೆ ಸೆರೆನಾ ಪಾತ್ರರಾಗಿದ್ದಾರೆ.
ಇದನ್ನೂ ಓದಿ : ಟೋಕಿಯೋ ಪ್ಯಾರಾಲಿಂಪಿಕ್ಸ್: ಟೇಬಲ್ ಟೆನಿಸ್ನಲ್ಲಿ ದೇಶಕ್ಕೆ ಬೆಳ್ಳಿ ಪದಕ ತಂದ ಭಾವಿನಾ ಬೆನ್ ಪಟೇಲ್