ವೈದ್ಯರು ಸಾಕ್ಷಾತ್ ದೇವರು ಎನ್ನುವ ಮಾತು ಪ್ರಚಲಿತದಲ್ಲಿದೆ. ಹಲವು ಸಲ ಈ ಮಾತು ರುಜುವಾತೂ ಆಗಿದೆ. ಇದೀಗ, ಅಂತಹದ್ದೇ ಒಂದು ಪ್ರಸಂಗ ನಡೆದಿದ್ದು, ವೈದ್ಯನೊಬ್ಬ ಕ್ಷಣಾರ್ಧದಲ್ಲಿಯೇ ವ್ಯಕ್ತಿಯೊಬ್ಬನನ್ನು ಹೃದಯಾಘಾತದಿಂದ (Heart Attack) ಕಾಪಾಡಿ ಪ್ರಾಣ ಉಳಿಸಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರದ ಕ್ಲಿನಿಕ್ನಲ್ಲಿ ವೈದ್ಯನ ಮುಂದೆ ರೋಗಿಯೊಬ್ಬ ಕುಳಿತಿದ್ದಾನೆ. ಇದ್ದಕ್ಕಿಂದಂತೆಯೇ ರೋಗಿಗೆ ಹೃದಯಾಘಾತ (Heart Attack) ಕಾಣಿಸಿಕೊಂಡಿದೆ.
ತಕ್ಷಣವೇ ಎಚ್ಚೆತ್ತ ವೈದ್ಯ ರೋಗಿಗೆ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಆತನ ಜೀವ ಕಾಪಾಡಿದ್ದಾನೆ. ಈ ವಿಡಿಯೋ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸದ್ಯ ಸಾಕಷ್ಟು ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ವೈದ್ಯನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ವೈದ್ಯನೇ ಮತ್ತೊಬ್ಬ ದೇವರು ಎಂದು ಹಾಡಿ ಹೊಗಳುತ್ತಿದ್ದಾರೆ.
ಇದನ್ನೂ ಓದಿ : Heart Attack: ವೇದಿಕೆಯಲ್ಲಿ ಕುಸಿದು ಪ್ರಾಣಬಿಟ್ಟ ಹನುಮನ ವೇಷಧಾರಿ