No Result
View All Result
ಗಣರಾಜ್ಯೋತ್ಸವದಂದು (Republic Day) ಐತಿಹಾಸಿಕ ಪಥಸಂಚಲನ (Parade) ನಡೆಯುವ ರಾಜಪಥದ (Rajpath) ಹೆಸರನ್ನು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಸರ್ಕಾರ ಬದಲಿಸಲು ನಿರ್ಧರಿಸಿದೆ.
ರಾಜಪಥಕ್ಕೆ ಕರ್ತವ್ಯಪಥ (Kartavya Path) ಎಂದು ಮರು ನಾಮಕರಣ ಮಾಡಲಾಗುತ್ತದೆ.
ಸೆಪ್ಟೆಂಬರ್ 7ರಂದು ಬುಧವಾರ ದೆಹಲಿ (Delhi) ಮಹಾಗನಗರ ಪಾಲಿಕೆ ರಾಜಪಥಕ್ಕೆ ಮರು ನಾಮಕರಣ ಮಾಡುವ ಸಂಬಂಧ ಸಭೆ ಕರೆದಿದೆ. ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಮರು ನಾಮಕರಣದ ಪ್ರಸ್ತಾಪ ಸಿದ್ಧಪಡಿಸಿದೆ.
ರಾಷ್ಟ್ರಪತಿ ಭವನದಿಂದ (Rastrapati Bhavan) ವಿಜಯ್ ಚೌಕ್ (Vijay Chowk) ಮೂಲಕ ಇಂಡಿಯಾ ಗೇಟ್ (India Gate) ಮಾರ್ಗವಾಗಿ ರಾಷ್ಟ್ರೀಯ ಯುದ್ಧ ಸ್ಮಾರಕ (National War Memorial) ಮೂಲಕ ರಾಷ್ಟ್ರೀಯ ಕ್ರೀಡಾಂಗಣ(National Stadium) ದವರೆಗಿನ ಮಾರ್ಗವನ್ನು ರಾಜಪಥ ಬದಲು ಕರ್ತವ್ಯಪಥ ಎಂದು ಹೆಸರು ಬದಲಿಸಲಾಗುತ್ತದೆ.
1911ರಲ್ಲಿ ಕಲ್ಕತ್ತಾದಿಂದ ದೆಹಲಿಗೆ ಬ್ರಿಟಿಷರು ಭಾರತದಲ್ಲಿ ತಮ್ಮ ರಾಜಧಾನಿಯನ್ನು ಬದಲಿಸಿಕೊಂಡ ಬಳಿಕ ರಾಜಪಥವನ್ನು ನಿರ್ಮಿಸಲಾಗಿತ್ತು. 1911ರಲ್ಲಿ ಈ ಮಾರ್ಗಕ್ಕೆ ಅಂದಿನ ಬ್ರಿಟನ್ ರಾಜ ಜಾರ್ಜ್ -5 ಗೌರವಾರ್ಥ ಕಿಂಗ್ಸ್ ವೇ (Kings Way) (ರಾಜನ ಮಾರ್ಗ) ಎಂದು ನಾಮಕರಣ ಮಾಡಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೊಸ ಸಂಸತ್ ಭವನ, ಕೇಂದ್ರ ಸರ್ಕಾರದ ಸಚಿವಾಲಯದ ಮತ್ತು ಇತರೆ ಸರ್ಕಾರಿ ಕಟ್ಟಡಗಳನ್ನು ಒಳಗೊಂಡ ಸೆಂಟ್ರಲ್ ವಿಸ್ತಾ (Centra Vista Project) ಯೋಜನೆ ಈ ಮಾರ್ಗದಲ್ಲೇ ಇದೆ.
2014ರಲ್ಲಿ ಪ್ರಧಾನಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಲವು ಯೋಜನೆಗಳು, ಸಂಸ್ಥೆಗಳು ಮತ್ತು ಮಾರ್ಗಗಳಿಗೆ ಮರು ನಾಮಕರಣ ಮಾಡಿದೆ.
1. ಪ್ರಧಾನಮಂತ್ರಿಗಳ ನಿವಾಸ (Prime Minister Residence) ಇರುವ ಸೆವೆನ್ ಆರ್ಸಿಆರ್ (ರೇಸ್ ಕೋರ್ಸ್ ರಸ್ತೆ) (7RCR) ಯನ್ನು ಲೋಕ ಕಲ್ಯಾಣ ಮಾರ್ಗ (Lok Kalyan Marg) ಎಂದು ಮರು ನಾಮಕರಣ.
2. ಔರಂಗಜೇಬ್ ಮಾರ್ಗವನ್ನು ಡಾ ಎಪಿಜೆ ಅಬ್ದುಲ್ ಕಲಾಂ ಮಾರ್ಗ ಎಂದು ಮರು ನಾಮಕರಣ
3. ತೀನ್ ಮೂರ್ತಿ ಚೌಕ್ – ತೀನ್ ಮೂರ್ತಿ ಹೈಫಾ ಚೌಕ್ ಎಂದು ನಾಮಕರಣ (ಹೈಫಾ ಇದು ಇಸ್ರೇಲ್ ನಗರಿ – 2018ರಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಹ್ಯು ಭಾರತಕ್ಕೆ ಭೇಟಿ ನೀಡಿದ್ದರ ಗೌರವಾರ್ಥ ಮರು ನಾಮಕರಣ)
4.ಯೋಜನಾ ಆಯೋಗ: ನೀತಿ ಆಯೋಗ ಎಂದು ಮರು ನಾಮಕರಣ
No Result
View All Result
error: Content is protected !!