ADVERTISEMENT
ನಾಳೆ ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮವನ್ನು ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಮುಂದೂಡಿದೆ.
ನಾಳೆ ಬದಲು ಅಂದರೆ ಸೆಪ್ಟೆಂಬರ್ 8ರ ಬದಲು ಸೆಪ್ಟೆಂಬರ್ 11ರಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮ ನಡೆಯಲಿದೆ.
ಆಹಾರ ಮತ್ತು ಅರಣ್ಯ ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆಯಲ್ಲಿ ಇವತ್ತು ಬೆಳಗ್ಗೆಯಷ್ಟೇ ಒಂದು ದಿನದ ಮಟ್ಟಿಗೆ ಶೋಕಾಚಾರಣೆ ಘೋಷಿಸಿ ಸಿಎಂ ಬೊಮ್ಮಾಯಿ ಸರ್ಕಾರ ಆದೇಶಿಸಿತ್ತು.
ಆ ತೀರ್ಮಾನವನ್ನು ಮಧ್ಯಾಹ್ನದ ವೇಳೆಗೆ ಬದಲಿಸಿರುವ ಬೊಮ್ಮಾಯಿ ಸರ್ಕಾರ ಮೂರು ದಿನಕ್ಕೆ ವಿಸ್ತರಿಸಿದೆ. ಸೆಪ್ಟೆಂಬರ್ 10ರವರೆಗೂ ರಾಜ್ಯದಲ್ಲಿ ಶೋಕಾಚಾರಣೆ ಜಾರಿಯಲ್ಲಿರಲಿದೆ.
ADVERTISEMENT