ಜಮ್ಮುವಿನಲ್ಲಿ ನೃತ್ಯ ಮಾಡುತ್ತಲೇ ಕುಸಿದುಬಿದ್ದು ಕಲಾವಿದರೊಬ್ಬರು ಸಾವನ್ನಪ್ಪಿರುವ (Artist Died While Dancing) ದಾರುಣ ಘಟನೆ ವರದಿಯಾಗಿದೆ.
ಯೋಗೇಶ್ ಗುಪ್ತಾ ಎಂಬ ವ್ಯಕ್ತಿ ನೃತ್ಯ ಮಾಡುತ್ತಿರುವಾಗಲೇ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ (Artist Died While Dancing).
ಜಮ್ಮುವಿನ ಬಿಷ್ನಾ ಪ್ರದೇಶದಲ್ಲಿ ನಡೆದ ಗಣೇಶ ಉತ್ಸವದಲ್ಲಿ ಪಾರ್ವತಿ ದೇವಿಯ ವೇಷವನ್ನು ಧರಿಸಿರುವ ಯೋಗೇಶ್ ಗುಪ್ತಾ ನೃತ್ಯ ಮಾಡುತ್ತಲೇ ಕುಸಿದುಬಿದ್ದು ಸಾವನ್ನಪ್ಪಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ : BIG BREAKING ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ನಿಧನ
ಗಣೇಶ ಮಹೋತ್ಸವ : ಜಮ್ಮುವಿನಲ್ಲಿ ಪಾರ್ವತಿ ವೇಷಧರಿಸಿ ನೃತ್ಯ ಮಾಡುತ್ತಲೇ ಸಾವನ್ನಪ್ಪಿದ ಕಲಾವಿದ ಯೋಗೇಶ್ ಗುಪ್ತಾ. #JammuAndKashmir #Ganeshotsav2022 #Yogeshgupta pic.twitter.com/tsRIhgsMCx
— ಸಿದ್ದನಗೌಡ (Siddanagouda) (@siddugouda5) September 8, 2022
ದೃಶ್ಯದಲ್ಲಿ ಪಾರ್ವತಿಯ ವೇಷದಲ್ಲಿರುವ ಯೋಗೇಶ್ ನೃತ್ಯ ಭಾಗವಾಗಿ ನೆಲಕ್ಕೆ ಬೀಳುತ್ತಾನೆ. ಮತ್ತೆ ಎದ್ದು ನೃತ್ಯ ಮಾಡುತ್ತಾ ಕುಸಿದು ಬೀಳುತ್ತಾರೆ. ಇತ್ತ, ಸಂಗೀತ ಮುಂದುವರೆಯುತ್ತಿರುತ್ತದೆ, ಆದಾಗ್ಯೂ ಯೋಗೇಶ್ ಮೇಲೆ ಏಳುವುದಿಲ್ಲ. ಭಗವಾನ್ ಶಿವನ ವೇಷವನ್ನು ಧರಿಸಿದ ಇನ್ನೊಬ್ಬ ಕಲಾವಿದ ವೇದಿಕೆಯತ್ತ ಹೋಗಿ ಪರೀಕ್ಷಿಸಿದ ನಂತರವಷ್ಟೇ, ನೃತ್ಯಗಾರ ಯೋಗೇಶ ಪ್ರಜ್ಞೆ ಕಳೆದುಕೊಂಡಿರುವ ವಿಷಯ ತಿಳಿಯುತ್ತದೆ. ಆಸ್ಪತ್ರೆಗೆ ಅವರನ್ನು ದಾಖಲಿಸಿತಾದರೂ, ಬದುಕುಳಿಸಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.
ಕಳೆದ 2 ವರ್ಷಗಳಿಂದ ದೇಶದಾದ್ಯಂತ ಹಲವು ಹೃದಯಾಘಾತದ ಘಟನೆಗಳು ವರದಿಯಾಗುತ್ತಿವೆ. ಇದನ್ನೂ ಓದಿ : ಚಿರು ಸರ್ಜಾ, ಪುನೀತ್, ಸೋನಾಲಿ ಪೊಗಾಟ್ – ಭಾರತೀಯ ಯುವಕರಲ್ಲೇಕೆ ಹೃದಯಾಘಾತ ಹೆಚ್ಚು