ಕಾಡಿನೊಳಗೆ ಸಫಾರಿ ವಾಹನದ ಮೇಲೆ ಕಾಡಾನೆಯೊಂದು ಹಠಾತ್ ದಾಳಿ ನಡೆಸಿದ್ದು (Wild elephant attack), ಪ್ರವಾಸಿಗರು ಕೂದಲೆಳೆ ಅಂತರದಲ್ಲಿ ಪಾರಾದ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ.
ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿನ ಕಬಿನಿ ಹಿನ್ನೀರು ಪ್ರದೇಶದ ಅರಣ್ಯದಲ್ಲಿ ಈ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಪ್ರವಾಸಿಗರು ಕಬಿನಿ ಹಿನ್ನೀರು ಪ್ರದೇಶದ ಅರಣ್ಯದಲ್ಲಿ ಸಫಾರಿಗೆ ಜೀಪಿನಲ್ಲಿ ತೆರಳುವ ಮಾರ್ಗದಲ್ಲಿ ಒಂಟಿ ಸಲಗ ಏಕಾಏಕಿ ಎದುರಾಗಿದೆ.
ಸಲಗ ದಾಳಿ ಮಾಡುವ (Wild elephant attack) ಸುಳಿವು ಅರಿತ ಜೀಪ್ ಚಾಲಕ ಪ್ರಕಾಶ್ ಅವರ ಸಮಯ ಪ್ರಜ್ಞೆಯಿಂದ ದುರಂತ ನಡೆಯುವುದು ತಪ್ಪಿದೆ. ಕಾಡಾನೆ ದಾಳಿಗೆ ಮುಂದಾಗುತ್ತಿದ್ದಂತೆ ಚಾಲಕ ಜೀಪನ್ನು ಹಿಮ್ಮುಖವಾಗಿ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ಇದನ್ನೂ ಓದಿ : ವಿದ್ಯುತ್ ತಂತಿ ಸ್ಪರ್ಶಿಸಿ ಒಂಟಿ ಸಲಗ ಸಾವು
ಈ ನಡುವೆ ಹಿಂದಕ್ಕೆ ಚಲಿಸಲಾಗದೇ ಜೀಪ್ ನಿಲ್ಲುತ್ತಿದ್ದಂತೆ, ಯಾವುದೇ ತೊಂದರೆ ನೀಡದೇ ಕಾಡಾನೆ ದಟ್ಟಾರಣದದತ್ತ ತೆರಳಿದೆ. ಇನ್ನೇನು ಆನೆ ದಾಳಿ ಮಾಡಿಯೇ ಬಿಟ್ಟಿತು ಎಂದು ಭೀತಿಗೊಂಡಿದ್ದ ಪ್ರವಾಸಿಗರು ನಿರಾಳರಾಗಿದ್ದಾರೆ. ಪ್ರವಾಸಿಗರಿಗೆ ಹೋದ ಜೀವ ಮತ್ತೆ ಬಂದಂತ ಅನುಭವವಾಗಿದೆ.
ಜೀಪ್ ಮೇಲೆ ಆನೆ ದಾಳಿಗೆ ಮುಂದಾದ ದೃಶ್ಯ ಪ್ರವಾಸಿಗರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಘಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಂಗಲ್ ಲಾಡ್ಸ್ ರೆಸಾರ್ಟ್ಸ್ ನ ಜೀಪ್ ಚಾಲಕ ಪ್ರಕಾಶ್ ನ ಸಮಯ ಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಇದನ್ನೂ ಓದಿ : ಮೃತ ಅಜ್ಜಿಯ ಮೇಲೆ ಕಾಡಾನೆಗೆ ಏಕೆ ಅಷ್ಟೊಂದು ಕೋಪ – ಮೃತ ದೇಹವನ್ನೂ ಬಿಡದ ಆನೆ