ಗ್ಯಾನವಾಪಿ ಮಸೀದಿಯಲ್ಲಿ (Gyanavaapi Masjid) ಹಿಂದೂ ದೇವತೆಗಳ ಕುರುಹುಗಳಿದ್ದು, ಅಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂಬ ಹಿಂದೂಗಳ ಅರ್ಜಿಯನ್ನು ವಾರಣಾಸಿ ಜಿಲ್ಲಾ ಕೋರ್ಟ್ (Varanasi Court) ಪುರಸ್ಕರಿಸಿದೆ. ಇದರಿಂದ ಹಿನ್ನಡೆಯಾಗಿರುವ ಹಿನ್ನೆಲೆಯಲ್ಲಿ, ಮಸೀದಿ ಸಮಿತಿ ಅಲಹಾಬಾದ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲು ತೀರ್ಮಾನಿಸಿದೆ ಎನ್ನಲಾಗಿದೆ.
ಗ್ಯಾನವಾಪಿ ಮಸೀದಿಯನ್ನು ಪ್ರತಿನಿಧಿಸುತ್ತಿರುವ ಅಂಜುಮನ್ ಇಂತಜಾಮಿಯಾ ಸಮಿತಿ ಇದೀಗ ಜಿಲ್ಲಾ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಲಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ : ಗ್ಯಾನವಾಪಿ ಮಸೀದಿ – ಇವತ್ತು ಏನು ಹೊರಬೀಳಬಹುದು ಆದೇಶ..?
ಗ್ಯಾನವಾಪಿ ಮಸೀದಿಯಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಐವರು ಮಹಿಳೆಯರು ಕೋರ್ಟ್ ಗೆ ಮನವಿ ಮಾಡಿದ್ದರು. ಮಸ್ಲಿಂ ಸಮಿತಿಯಿಂದಲೂ ಅರ್ಜಿ ವಿಚಾರಣೆ ನಡೆಸಬಾರದು ಎಂದು ಅರ್ಜಿ ಸಲ್ಲಿಸಲಾಗಿತ್ತು. ಇದೀಗ, ವಿಚಾರಣೆ ನಡೆಸಿರುವ ನ್ಯಾಯಾಲು ಹಿಂದೂಗಳ ಅರ್ಜಿ ವಿಚಾರಣೆಗೆ ಯೋಗ್ಯ ಎಂದು ಹೇಳಿದ್ದು, ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದೆ.
ಐವರು ಮಹಿಳೆಯರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ವಾರಣಾಸಿ ಜಿಲ್ಲಾ ಕೋರ್ಟ್ ಸೆ.22 ಕ್ಕೆ ನಿಗದಿಪಡಿಸಿದೆ.
ಕೋರ್ಟ್ ತೀರ್ಪಿಗೂ ಮುನ್ನ ಮಾತನಾಡಿದ್ದ ಅಡ್ವೊಕೇಟ್ ವಿಷ್ಣು ಶಂಕರ್ ಜೈನ್, 1991ರ ಆರಾಧನಾ ಕಾಯ್ದೆ ನಮ್ಮ ಪರವಾಗಿದೆ. ತೀರ್ಪು ನಮ್ಮ ಪ್ರಕಾರ ಬಂದರೆ, ನಾವು ಕೋರ್ಟ್ ನಲ್ಲಿ ಎಎಸ್ಐ ಸರ್ವೇ, ಶಿವಲಿಂಗದ ಕಾರ್ಬಲ್ ಡೇಟಿಂಗ್ ಗೆ ಅನುಮತಿ ಕೇಳುತ್ತೇವೆ ಎಂದು ತಿಳಿಸಿದ್ದರು. ಇದನ್ನೂ ಓದಿ : ಗ್ಯಾನವಾಪಿ ಮಸೀದಿ ವಿವಾದ – ಶಿವಲಿಂಗ ಪತ್ತೆ ಆಗಿರುವ ಪ್ರದೇಶ ಸಂರಕ್ಷಿಸಿ, ನಮಾಜ್ ಗೆ ನಿರ್ಬಂಧ ಹೇರಲ್ಲ – ಸುಪ್ರೀಂಕೋರ್ಟ್ ಆದೇಶ