ಏಷ್ಯಾ ಕಪ್ನಲ್ಲಿ (AsiaCup)ಎಲ್ಲರ ಕಣ್ಣು ಭಾರತ(India), ಪಾಕಿಸ್ತಾನದ (Pakistan) ಮೇಲೆಯೇ ಇದ್ದಂತಹ ಸಂದರ್ಭದಲ್ಲಿ, ಪ್ರತಿಕೂಲ ಪರಿಸ್ಥಿತಿ ನಡುವೆಯೂ, ಯಾವುದೇ ನಿರೀಕ್ಷೆಗಳು ಇಲ್ಲದೇ ಕಣಕ್ಕಿಳಿದ ಶ್ರೀಲಂಕಾ (Srilanka) ಏಷ್ಯಾ ಕಪ್ ಗೆದ್ದು ಮಿನುಗಿದೆ. ಫೈನಲ್ನಲ್ಲಿ ಪಾಕ್ ತಂಡವನ್ನು ಸೋಲಿಸಿ ಆರನೇ ಬಾರಿ ಏಷ್ಯಾ ಕಪ್ ಮುದ್ದಾಡಿದೆ. ಇದನ್ನು ಉಲ್ಲೇಖಿಸಿ ಉದ್ಯಮಿ ಆನಂದ್ ಮಹಿಂದ್ರಾ (Anand Mahindra)ಮಾಡಿರುವ ಟ್ವೀಟ್ (Tweet)ಎಲ್ಲರನ್ನು ಚಿಂತನೆಗೆ ಹಚ್ಚುತ್ತಿದೆ.
ಶ್ರೀಲಂಕಾ ಸಾಧಿಸಿದ ಗೆಲುವುದು ನನಗೆ ಥ್ರಿಲ್ಲಿಂಗ್ ಎನಿಸಿತು. ಇದು ಪಾಕ್ ಸೋಲಿನಿಂದ ಬಂದಿದ್ದಲ್ಲ. ಗುಂಪು ಕ್ರೀಡೆಗಳಲ್ಲಿ ಸಾಧಿಸುವ ಗೆಲುವು ಸೆಲೆಬ್ರಿಟಿಗಳು(Celebrities), ಸೂಪರ್ ಸ್ಟಾರ್ಗಳು (Super stars )ಇದ್ದಾರೆ ಎನ್ನುವುದಕ್ಕಿಂತ ಸಂಘಟಿತ ಆಟದ (Team work)ಮೇಲೆ ನಿರ್ಧಾರಿತವಾಗಿರುತ್ತದೆ. ಶ್ರೀಲಂಕಾ ಗೆಲುವು ಇದೇ ವಿಚಾರವನ್ನು ನಮಗೆ ನೆನಪಿಸಿದೆ ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ಟೂರ್ನಿ ಆರಂಭದ ಮ್ಯಾಚ್ನಲ್ಲಿ ಆಫ್ಘನ್ ವಿರುದ್ಧ ಸೋತಿದ್ದ ಲಂಕಾ, ಅಸಲಿಗೆ ಪ್ರಶಸ್ತಿ ರೇಸ್ನಲ್ಲಿಯೇ ಇದ್ದಂತೆ ಕಂಡುಬಂದಿರಲಿಲ್ಲ. ನಂತರದ ಪಂದ್ಯಗಳು ಲಂಕಾ ಬಗ್ಗೆ ಬೇರೆಯದ್ದೇ ಅಭಿಪ್ರಾಯ ಮೂಡುವಂತೆ ಮಾಡಿದ್ದವು. ಒಂದೇ ಒಂದು ಪಂದ್ಯವನ್ನು ಸೋಲಲಿಲ್ಲ. ಭಾನುವಾರ ನಡೆದ ಫೈನಲ್ಲ್ಲಿ 23 ರನ್ಗಳ ಅಂತರದಿಂದ ಪಾಕ್ ವಿರುದ್ಧ ಗೆದ್ದು ಕಪ್ ಎತ್ತಿ ಹಿಡಿದಿತ್ತು.
ಸೂಪರ್ ಬ್ಯಾಟಿಂಗ್ನೊಂದಿಗೆ ಭಾನುಕ ರಾಜಪಕ್ಷ, ಆಲ್ರೌಂಡ್ ಪ್ರದರ್ಶನದಿಂದ ಹಸರಂಗ ಡಿಸಿಲ್ವಾ, ಮಿಂಚಿನ ಬೌಲಿಂಗ್ನಿಂದ ಪ್ರಮೋದ್ ಮದುಷಾನ್ ಲಂಕಾವನ್ನು ಗೆಲ್ಲಿಸಿದ್ದರು.