ಕನ್ನಡದ ಬಿಗ್ ಬಾಸ್ ಸೀಜನ್ 9 ರ (Kannada BiggBoss Season 9) ವೇದಿಕೆಗೆ ನಟ ಅನಿರುದ್ಧ್ (Actor Aniruddh) ಹೋಗುತ್ತಾರೆ ಎನ್ನುವ ಬಗ್ಗೆ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಇಂದು ಈ ಬಗ್ಗೆ ಮೊದಲ ಬಾರಿಗೆ ಅನಿರುದ್ಧ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ವಾಹಿನಿಯ ಸುದ್ದಿಯನ್ನು ಹಂಚಿಕೊಂಡ ಅವರು, ನಾನು ಬಿಗ್ ಬಾಸ್ಗೆ ಹೋಗುತ್ತಿಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ, ಒಟಿಟಿ ವೇದಿಕೆಯಲ್ಲಿ ಮೊದಲ ಬಿಗ್ ಬಾಸ್ ನಡೆಯುತ್ತಿದೆ. ಈ ವಾರಾಂತ್ಯಕ್ಕೆ ಈ ಶೋ ಮುಕ್ತಾಯಗೊಳ್ಳಲಿದೆ. ಅನಂತರ ಕೆಲವೇ ದಿನಗಳಲ್ಲಿ ಕನ್ನಡ ಬಿಗ್ ಬಾಸ್ ಸೀಜನ್ 9 ಆರಂಭವಾಗಲಿದೆ ಎಂದು ಕಿಚ್ಚ ಸುದೀಪ್ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ : BREKING: ಜೊತೆ ಜೊತೆಯಲಿ ಧಾರಾವಾಹಿ – ಹೊಸ ಆರ್ಯವರ್ಧನ್ ಇವರೇನಾ..?
ಬಿಗ್ ಬಾಸ್ ಸೀಜನ್ 9 ಕ್ಕೆ (Kannada BiggBoss Season 9) ಹೋಗುವ ಸ್ಪರ್ಧಿಗಳ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಜೋರಾದ ಚರ್ಚೆ ನಡೆಯುತ್ತಿದೆ. ಒಟಿಟಿ ವೇದಿಕೆಯಿಂದ 4 ಜನ ಸ್ಪರ್ಧಿಗಳು ಟಿವಿ ಬಿಗ್ ಬಾಸ್ಗೆ ಹೋಗಲಿದ್ದಾರೆ.
ಇನ್ನು, ಜೊತೆಜೊತೆಯಲಿ ಧಾರಾವಾಹಿಯ ಮೂಲಕ ಆರ್ಯವರ್ಧನ್ ಎಂದೇ ಖ್ಯಾತಿಯಾಗಿರುವ ನಟ ಅನಿರುದ್ಧ್ ಅವರನ್ನು ಇತ್ತೀಚೆಗಷ್ಟೇ ಧಾರವಾಹಿ ತಂಡ ಕೈಬಿಟ್ಟಿತ್ತು. ಅಲ್ಲದೇ. ಅವರ ಮೇಲೆ ಹಲವು ಆರೋಪಗಳನ್ನು ಮಾಡಿತ್ತು. ಮತ್ತು ನಟ ಅನಿರುದ್ಧ್ ಅವರನ್ನು ಯಾವುದೇ ಕಿರುತೆರೆಯಲ್ಲಿ ಹಾಗೂ ರಿಯಾಲಿಟಿ ಶೋಗಳಲ್ಲಿ ತೆಗೆದುಕೊಳ್ಳಬಾರದು ಎಂದು ಟೆಲಿವಿಷನ್ ನಿರ್ದೇಶಕರ ತಂಡ ಆಗ್ರಹಿಸಿತ್ತು.
ಇದೀಗ, ನಟ ಆರ್ಯವರ್ಧನ್ (Actor Aniruddh) ಅವರೇ ನಾನು ಬಿಗ್ಬಾಸ್ ಸೀಜನ್ 9 ಕ್ಕೆ ಹೋಗುತ್ತಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಇದುವರೆಗೂ ನಡೆಯುತ್ತಿದ್ದ ಚರ್ಚೆಗೆ ತಿಲಾಂಜಲಿ ನೀಡಿದ್ದಾರೆ. ಇದನ್ನೂ ಓದಿ : ಹುಟ್ಟುಹಬ್ಬದ ದಿನವೇ ವಿಷ್ಣುವರ್ಧನ್ ಪ್ರತಿಮೆ ತೆರವುಗೊಳಿಸಿದ ಪೊಲೀಸರು