ಮಂಗಳವಾರ ಮಹಾರಾಷ್ಟ್ರದ (Maharastra) ಸಾಂಗ್ಲಿ ಜಿಲ್ಲೆಯಲ್ಲಿ ಮಕ್ಕಳ ಕಳ್ಳರೆಂದು ಶಂಕಿಸಿ ನಾಲ್ವರು ಸಾಧುಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ ಘಟನೆ ವರದಿಯಾಗಿದೆ.
ಸಾಂಗ್ಲಿ ಜಿಲ್ಲೆಯ ಲವಣ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಜನ ವಸತಿ ಪ್ರದೇಶದಲ್ಲಿ ಸಾಧುಗಳನ್ನು ದೊಣ್ಣೆಯಿಂದ ಥಳಿಸುತ್ತಿರುವುದು ಕಂಡುಬಂದಿದೆ.
ಉತ್ತರ ಪ್ರದೇಶ ಮೂಲದ ನಾಲ್ವರು ಸಾಧುಗಳು ಕಾರಿನಲ್ಲಿ ಕರ್ನಾಟಕದ ಬಿಜಾಪುರದಿಂದ ಪಂಡರಾಪುರದ ದೇವಸ್ಥಾನದ ಕಡೆಗೆ ಹೋಗುತ್ತಿದ್ದಾಗ ಜಾಟ್ ತೆಹಸಿಲ್ನ ಲವಂಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಇಬ್ಬರು ಸಾಧುಗಳ ಹತ್ಯೆ – ಬಂಧಿತ ಕೊಲೆ ಆರೋಪಿಗಳ ಹೆಸರು ಬಹಿರಂಗ
ಸಾಧುಗಳು ಸೋಮವಾರ ಗ್ರಾಮದ ದೇವಸ್ಥಾನದಲ್ಲಿ ತಂಗಿದ್ದರು. ಮಂಗಳವಾರ ಪ್ರಯಾಣವನ್ನು ಪುನರಾರಂಭಿಸುವಾಗ ಹುಡುಗನ ಬಳಿ ದಾರಿ ಕೇಳಿದ್ದಾರೆ. ಇದು ಅವರು ಮಕ್ಕಳನ್ನು ಅಪಹರಿಸುವ ಕ್ರಿಮಿನಲ್ ಗ್ಯಾಂಗ್ಗಳಿಗೆ ಸೇರಿದವರಾಗಿರಬಹುದು ಎಂದು ಕೆಲವು ಸ್ಥಳೀಯರು ಅನುಮಾನಿಸಲು ಕಾರಣವಾಯಿತು.
ಮಕ್ಕಳ ಕಳ್ಳರೆಂದು ಭಾವಿಸಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಲವಣ ಎಂಬ ಗ್ರಾಮದಲ್ಲಿ ಸಾಧುಗಳ ಮೇಲೆ ಹಲ್ಲೆ ನಡೆಸಲಾಗಿದೆ. #Maharastra #Sangli #AkhadaSadhu pic.twitter.com/IGHK90GSqb
— ಸಿದ್ದನಗೌಡ (Siddanagouda) (@siddugouda5) September 14, 2022
ಜಗಳ ವಿಕೋಪಕ್ಕೆ ಹೋಗಿದ್ದು, ಸ್ಥಳೀಯರು ಸಾಧುಗಳನ್ನು ದೊಣ್ಣೆಗಳಿಂದ ಹೊಡೆದಿದ್ದಾರೆ ಎಂದು ಅಧಿಕಾರಿ ಹೇಳಿದರು. ಪೊಲೀಸ್ ತಂಡವು ಸ್ಥಳಕ್ಕೆ ಭೇಟಿ ನೀಡಿ ಸಾಧುಗಳು ಉತ್ತರ ಪ್ರದೇಶದ `ಅಖಾಡಾ’ ಸದಸ್ಯರು ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದ (Maharastra) ಬಿಜೆಪಿ ಶಾಸಕ ರಾಮ್ ಕದಂ (Ram Kadam) ಈ ಘಟನೆಯನ್ನು ಖಂಡಿಸಿದ್ದಾರೆ. ಪಾಲ್ಘರ್ನಲ್ಲಿ ನಡೆದಿದ್ದ ಘಟನೆಯನ್ನು ನೆನೆದ ಅವರು, ಉದ್ಧವ್ ಠಾಕ್ರೆಯವರ ರೀತಿ ನಮ್ಮ ಸರ್ಕಾರ ಸಾಧುಗಳ ಮೇಲಿನ ಹಲ್ಲೆಯನ್ನು ಸಹಿಸುವುದಿಲ್ಲ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಮತ್ತೊಂದು ಭೀಕರ ದುರಂತ – ಐಸಿಯುನಲ್ಲಿ ಬೆಂಕಿ -13ಮಂದಿ ಸಜೀವ ದಹನ