ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದಡಿಯಲ್ಲಿ (ಪೋಕ್ಸೋ ಕಾಯ್ದೆ) ಬಂಧಿರಾಗುರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶ್ರೀಗಳಿಗೆ (Murugha Matt Shree) ನ್ಯಾಯಾಲಯ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ಶ್ರೀಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಸಂತ್ರಸ್ತೆಯರ ಅಭಿಪ್ರಯಾಕ್ಕಾಗಿ ಒಂದು ದಿನ ವಿಚಾರನೆಯನ್ನು ಮುಂದೂಡಿತ್ತು.
ಇಂದು ವಿಚಾರಣೆ ನಡೆಸಿದ ನ್ಯಾಯಪೀಠ ಮುರುಘಾ ಶ್ರೀಗಳಿಗೆ ಜಾಮೀನು ತಿರಸ್ಕರಿಸಿದೆ. ಅಲ್ಲದೇ, ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಸೆಪ್ಟಂಬರ್ 27 ಕ್ಕೆ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಲಿದೆ.
ಪೋಕ್ಸೋ ಕಾಯ್ದೆಯಡಿ ಬಂಧಿರಾಗಿರುವುವ ಚಿತ್ರದುರ್ಗ ಶ್ರೀಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ. 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಚಿತ್ರದುರ್ಗ ನ್ಯಾಯಾಲಯ ಆದೇಶಿಸಿದೆ. #MurughaMutt #MurughaShree #Chitradurga pic.twitter.com/jeqPleMUEg
— ಸಿದ್ದನಗೌಡ (Siddanagouda) (@siddugouda5) September 14, 2022
ಪೋಕ್ಸೋ ಕಾಯ್ದೆಯಡಿಯಲ್ಲಿ ಶ್ರೀಗಳನ್ನ ಬಂಧಿಸಿದ್ದ ಪೊಲೀಸರು ಅವರನ್ನು ಮಠಕ್ಕೆ ಕರೆತಂದ ಸ್ಥಳ ಮಹಜರು ನಡೆಸಿದ್ದರು. ತನಿಖಾ ಅಧಿಕಾರಿಗಳು ಶ್ರೀಗಳ ವಿಚಾರಣೆ ಪೂರ್ಣಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಆ ಹಿನ್ನೆಲೆಯಲ್ಲಿಯೇ ಅವರು ಮತ್ತೊಮ್ಮೆ ಶ್ರೀಗಳನ್ನು ಪೊಲೀಸ್ ಕಸ್ಟಡಿಗೆ ಕೇಳಲಿಲ್ಲ ಎನ್ನಲಾಗಿದೆ. ಇದನ್ನೂ ಓದಿ : Murugha Swamiji : ಮುರುಘಾ ಶ್ರೀ ಜಾಮೀನು ಅರ್ಜಿ ನಾಳೆಗೆ ಮುಂದೂಡಿಕೆ
ಏನಿದು ಪ್ರಕರಣ :
ಚಿತ್ರದುರ್ಗದ ಮಠದಲ್ಲಿದ್ದ ಶ್ರೀ ಅಕ್ಕಮಹಾದೇವಿ ವಸತಿ ನಿಲಯದಲ್ಲಿನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ಶ್ರೀಗಳ (Murugha Matt Shree) ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ ಒಬ್ಬ ವಿದ್ಯಾರ್ಥಿನಿ 3 ವರ್ಷದಿಂದ ಹಾಗೂ ಮತ್ತೊಬ್ಬ ವಿದ್ಯಾರ್ಥಿನಿಗೆ ಒಂದೂರೆ ವರ್ಷದಿಂದ ಶ್ರೀಗಳು ಲೈಂಗಿಕ ದರ್ಜನ್ಯ ನಡೆಸಿದ್ದಾರೆ ಎಂದು ವಿದ್ಯಾರ್ಥಿನಿಯರು ಮೈಸೂರಿನ ಒಡನಾಡಿ ಸಂಸ್ಥೆಯ ಮೂಲಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಶ್ರೀಗಳು ನಂ.1 ಆರೋಪಿಯಾಗಿದ್ದು, ವಾರ್ಡನ್ ರಶ್ಮಿ ಎರಡನೇ ಆರೋಪಿಯಾಗಿದ್ದಾರೆ. ಮಠದ ಉತ್ತರಾಧಿಕಾರಿ 3 ನೇ ಆರೋಪಿಗಳಾಗಿದ್ದಾರೆ. ಇದನ್ನೂ ಓದಿ : ಮುರುಘಾ ಮಠದ ಇತಿಹಾಸ ಮತ್ತು ಪರಂಪರೆ!