ಅಂತರಾಷ್ಟ್ರೀಯ ಎಲ್ಲಾ ವಿಧದ ಕ್ರಿಕೆಟ್ಗೆ ಕನ್ನಡಿಗ ಕೊಡಗಿನ ರಾಬಿನ್ ಉತ್ತಪ್ಪ (Robin Uttappa Retires) ಇಂದು ನಿವೃತ್ತಿ ಘೋಷಣೆ ಮಾಡಿದ್ದಾರೆ.
20 ವರ್ಷಗಳ ನಿರಂತರ ಕ್ರಿಕೆಟ್ ವೃತ್ತಿಗೆ 36 ವರ್ಷದ ರಾಬಿನ್ ಉತ್ತಪ್ಪ ನಿವೃತ್ತಿ ಘೋಷಣೆ ಮಾಡಿದ್ದಾರೆ. 2015 ರಲ್ಲಿ ಇವರು ಆಡಿದ್ದ ಪಂದ್ಯವೇ ಕೊನೆಯದ್ದಾಗಿದೆ.
ನನ್ನ ದೇಶ ಮತ್ತು ನನ್ನ ರಾಜ್ಯ ಕರ್ನಾಟಕವನ್ನು ಪ್ರತಿನಿಧಿಸುವುದು ನನಗೆ ದೊಡ್ಡ ಗೌರವವಾಗಿದೆ. ಹೇಗಾದರೂ, ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳಬೇಕು ಮತ್ತು ಕೃತಜ್ಞತೆಯ ಹೃದಯದಿಂದ, ನಾನು ಭಾರತೀಯ ಕ್ರಿಕೆಟ್ನ ಎಲ್ಲಾ ಪ್ರಕಾರಗಳಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ (Robin Uttappa Retires). ಎಲ್ಲರಿಗೂ ಧನ್ಯವಾದಗಳು ಎಂದು ರಾಬಿನ್ ಉತ್ತಪ್ಪ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್ಗೆ ‘ಇಯಾನ್ ಮೋರ್ಗನ್’ ನಿವೃತ್ತಿ
ಉತ್ತಪ್ಪ ಭಾರತವನ್ನು 46 ಏಕದಿನ ಪಂದ್ಯಗಳಲ್ಲಿ ಮತ್ತು 13 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ವೃತ್ತಿ ಜೀವನದಲ್ಲಿ ಏರಿಳಿತಗಳನ್ನು ಕಂಡಿರುವ ಉತ್ತಪ್ಪ ಕ್ರಮವಾಗಿ 934 ಮತ್ತು 249 ರನ್ ಗಳಿಸಿದ್ದಾರೆ.
It has been my greatest honour to represent my country and my state, Karnataka. However, all good things must come to an end, and with a grateful heart, I have decided to retire from all forms of Indian cricket.
Thank you all ❤️ pic.twitter.com/GvWrIx2NRs
— Robin Aiyuda Uthappa (@robbieuthappa) September 14, 2022
ಉತ್ತಪ್ಪ ಐಪಿಎಲ್ ದಂತಕಥೆಯಾಗಿದ್ದು, 205 ಪಂದ್ಯಗಳಲ್ಲಿ 27 ಅರ್ಧಶತಕಗಳನ್ನು ಒಳಗೊಂಡಂತೆ 4952 ರನ್ ಗಳಿಸಿದ್ದಾರೆ.
ಇವರು 2007 ರಲ್ಲಿ ನಡೆದ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದರು. ಇದನ್ನೂ ಓದಿ : BREAKING: IPLನಿಂದ ಸುರೇಶ್ ರೈನಾ ನಿವೃತ್ತಿ ಘೋಷಣೆ