ದೊಡ್ಡಬಳ್ಳಾಪುರದಲ್ಲಿ (Doddaballapur) ನಡೆದಿದ್ದ ಜನಸ್ಪಂದನ (Janaspandana) ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Ex Chief Minister Siddaramaiah) ಅವರ ಧಮ್, ತಾಕತ್ತು ಪ್ರಶ್ನಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ (CM Basavraj Bommai) ಅವರ ಧಮ್, ತಾಕತ್ತನ್ನು ಅವರದ್ದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಸಾಕಷ್ಟು ಹಿಂದೂ ಕಾರ್ಯಕರ್ತರ ಹತ್ಯೆ ಆಗುತ್ತಿದೆ. ಸರಿಯಾಗಿ ರಕ್ಷಣೆ ಇಲ್ಲ. ನಾವು ಸಮಯ ಸಂದರ್ಭ ಬಂದಾಗ ನಮ್ಮ ಗೃಹ ಸಚಿವರು (Home Minsiter), ಮುಖ್ಯಮಂತ್ರಿಗಳ ಜೊತೆಗೆ ಗಲಾಟೆ ಮಾಡಿದ್ದೀವಿ. ಮೊನ್ನೆ ಶಾಸಕಾಂಗ ಪಕ್ಷದಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದೀನಿ ಮುಖ್ಯಮಂತ್ರಿಗಳಿಗೆ, ಯಡಿಯೂರಪ್ಪನವರೂ ( B S Yadiyurappa) ಇದ್ದರು, ಗೃಹ ಮಂತ್ರಿ ಇದ್ದರು, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ಇದ್ದರು.
ಒಂದು ವೇಳೆ ಕರ್ನಾಟಕದಲ್ಲಿ ಇನ್ಮೇಲೆ ಹಿಂದೂಗಳ ಹತ್ಯೆಯಾದ್ರೆ ಜನ ನಿಮ್ಮನ್ನು ತಿರಸ್ಕಾರ ಮಾಡ್ತಾರೆ. ನಿಮಗೆ ಏನಾದ್ರೂ ಧಮ್ಮಿದ್ರೆ, ಬರೀ ಅವ್ರು ಸಿದ್ದರಾಮಯ್ಯಗೆ ಕೇಳ್ಬೇಡ್ರಿ, ನಿಮ್ಮಲ್ಲಿ ಧಮ್ ಇದ್ರೆ ಯಾರು ಹಿಂದೂಗಳ ಕಾರ್ಯಕರ್ತರ ಹತ್ಯೆ ಮಾಡ್ತಾರೋ ಅವರ ಎನ್ಕೌಂಟರ್ (Encounter) ಮಾಡಿದ್ರೆ ನಿಮ್ ಧಮ್ ಗೊತ್ತಾಗುತ್ತೆ ಅಂತ ಹೇಳಿದ್ದೀನಿ.
ಎಂದು ಯಾದಗಿರಿಯಲ್ಲಿ ಭಜರಂಗ ದಳ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ದರ್ಶನ ಪಡೆದ ಬಳಿಕ ಮಾತಾಡಿದರು.
ADVERTISEMENT
ADVERTISEMENT