ದೇಶದ ಪ್ರಮುಖ ಎಜುಟೆಕ್ (EduTech) ಕಂಪನಿ ಬೈಜುಸ್ (Byju’s) ಅಪಾರ ಪ್ರಮಾಣದ ನಷ್ಟ ಅನುಭವಿಸಿದೆ.
ಬುಧವಾರ ಪ್ರಕಟವಾಗಿರುವ ಬೈಜುಸ್ ಕಂಪನಿಯ ಲೆಕ್ಕಪರಿಶೋಧಕ ವರದಿ (Audit Report) ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಬೈಜುಸ್ (Byju’s) ನಷ್ಟ (Loss) ಒಂದು ವರ್ಷದ ಅವಧಿಯಲ್ಲಿ 20 ಪಟ್ಟು ಹೆಚ್ಚಳ ಆಗಿದೆ. ಒಂದು ವರ್ಷದ ಅವಧಿಯಲ್ಲಿ ಕಂಪನಿಯ ಆದಾಯ (Revenue) ಶೇಕಡಾ 3ರಷ್ಟು ಕುಸಿದಿದೆ.
ಈ ಹಿಂದಿನ ವರ್ಷ ಬೈಜುಸ್ ಆದಾಯ 2,704 ಕೋಟಿ ರೂಪಾಯಿ ಇತ್ತು. ಆದರೆ ಈ ವರ್ಷ ಬೈಜುಸ್ ಆದಾಯ 2,428 ಕೋಟಿ ರೂಪಾಯಿಗೆ ಕುಸಿದಿದೆ.
ಈ ಹಿಂದಿನ ವರ್ಷ (2019-20)ರಲ್ಲಿ ಬೈಜುಸ್ 231 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು. ಆದರೆ 2020-21ನೇ ಆರ್ಥಿಕ ವರ್ಷದಲ್ಲಿ ಕಂಪನಿ 20 ಪಟ್ಟು ಅಂದರೆ ಬರೋಬ್ಬರೀ 4,589 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.
ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯಕ್ಕೆ (MCA) ಬೈಜುಸ್ ಇನ್ನೂ ತನ್ನ ವಾರ್ಷಿಕ ವರದಿಯನ್ನು (Annual Report) ಸಲ್ಲಿಸಿಲ್ಲ. ವಾರ್ಷಿಕ ವರದಿ ಸಲ್ಲಿಕೆಗೆ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ ಬೈಜುಸ್ಗೆ ನೀಡಿದ್ದ ನಾಲ್ಕು ಗಡುವೂ ಮುಕ್ತಾಯ ಆಗಿದೆ.
ಈ ಮಧ್ಯೆ ಕಾಂಗ್ರೆಸ್ ಸಂಸದರೂ ಆಗಿರುವ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ (Karti Chidambaram) ಅವರು ಬೈಜುಸ್ ಹಣಕಾಸು ವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಗಂಭೀರ ವಂಚನೆಗಳ ತನಿಖಾ ಸಂಸ್ಥೆಗೆ (SFIO) ಪತ್ರ ಬರೆದಿದ್ದಾರೆ.
ಕೋವಿಡ್ (Covid) ಕಾಲಘಟ್ಟದಲ್ಲಿ ಗಳಿಕೆ ಹೆಚ್ಚಿಸಿಕೊಂಡಿದ್ದ ಎಜುಟೆಕ್ ಕಂಪನಿಗಳು ಕೋವಿಡ್ ಸೋಂಕು ಇಳಿಮುಖ ಆಗಿ ಶಾಲಾ-ಕಾಲೇಜುಗಳು ಮತ್ತೆ ಆರಂಭ ಆದ ಬಳಿಕ ಎಜುಟೆಕ್ ಕಂಪನಿಗಳ ಆದಾಯ ಕುಸಿಯಲು ಶುರುವಾಗಿತ್ತು.
ಈಗಾಗಲೇ ಬೈಜುಸ್ (Byju’s) ವೆಚ್ಚ ಕಡಿತದ ಭಾಗವಾಗಿ 2,500 ಮಂದಿ ನೌಕರರನ್ನು ಕೆಲಸದಿಂದ ತೆಗೆದುಹಾಕಿದೆ (Layoff).
ADVERTISEMENT
ADVERTISEMENT