ದೇಶ ವಿರೋಧಿ ಚಟುವಟಿಕೆಗಳಲ್ಲಿ (Anti-national conspiracy) ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ತೊಡಗಿಸಿಕೊಂಡಿದೆ ಎಂಬ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು ಆಂಧ್ರಪ್ರದೇಶ ಮತ್ತು ತೆಲಂಗಾಣದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ.
ಆಂಧ್ರಪ್ರದೇಶದ ಕರ್ನೂಲ್, ನೆಲ್ಲೂರು ಮತ್ತು ನಂದ್ಯಾಲ್ ಮತ್ತು ತೆಲಂಗಾಣದ ನಿಜಾಮಾಬಾದ್ನಾದ್ಯಂತ ಪ್ರಕರಣದ ಆರೋಪಿಗಳು ಮತ್ತು ಶಂಕಿತರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ಎನ್ಐಎ ನಡೆಸಿದೆ.
ಕಳೆದ ತಿಂಗಳು ಎನ್ಐಅ ಹೈದ್ರಾಬಾದ್ನಲ್ಲಿ 27 ಜನರ ವಿರುದ್ಧ ಕೇಂದ್ರ ಸರ್ಕಾರದ ವಿರುದ್ದ ಸಮರ ಸಾರಲು ಸಂಚು ರೂಪಿಸಿದ ಪ್ರಕರಣ (Anti-national conspiracy) ದಾಖಲಿಸಿಕೊಂಡಿತ್ತು. ಇದನ್ನೂ ಓದಿ : Breaking News : ಶೀಘ್ರವೇ PFI ನಿಷೇಧಕ್ಕೆ ಕೇಂದ್ರ ಸರ್ಕಾರ ಸಿದ್ಧತೆ
ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಲು ಕ್ರಿಮಿನಲ್ ಪಿತೂರಿಯನ್ನು ನಡೆಸಲಾಗಿದೆ. ಈ ಕೃತ್ಯಕ್ಕಾಗಿ ಪಿಎಫ್ಐ ಸದಸ್ಯರನ್ನು ನೇಮಿಸಿಕೊಳ್ಳಲಾಗಿದೆ. ಭಯೋತ್ಪಾದಕ ಕೃತ್ ಎಸಗಲು ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದೆ. ಅಲ್ಲದೇ, ಕಾನೂನು ಬಾಹಿರ ಸಭೆ ನಡೆಸಿ, ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷದ ಭಾವನೆ ಬಿತ್ತಿದ್ದಾರೆ. ಆ ಮೂಲಕ ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಅಡ್ಡಿಪಡಿಸುವ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಎನ್ಐಎ ದಾಖಲಿಸಿದ ಎಫ್ಐಆರ್ನಲ್ಲಿ ಹೇಳಲಾಗಿದೆ.
ಅ್ಲಲದೇ, ಪಿಎಫ್ಐ ಸದಸ್ಯರು ಕರಾಟೆ ತರಗತಿಗಳ ಹೆಸರಿನಲ್ಲಿ ಯುವಕರಿಗೆ ತರಬೇತಿ ಮತ್ತು ದೈಹಿಕ ವ್ಯಾಯಾಮಗಳನ್ನು ಪ್ರಾರಂಭಿಸಿದರು. ತಮ್ಮ ದ್ವೇಷಪೂರಿತ ಭಾಷಣಗಳ ಮೂಲಕ ನಿರ್ದಿಷ್ಟ ಸಮುದಾಯದ ವಿರುದ್ಧ ಯುವಕರನ್ನು ಪ್ರಚೋದಿಸುತ್ತಿದ್ದರು ಎಂದೂ ಎಫ್ಐಆರ್ ನಲ್ಲಿ ಹೇಳಲಾಗಿದೆ. ಇದನ್ನೂ ಓದಿ : ಪ್ರಧಾನಿ ಮೋದಿ ಹತ್ಯೆಗೆ ಸಂಚು : ನಿವೃತ್ತ ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರ ಬಂಧನ