ಪಂಜಾಬ್ನ ಚಂಡೀಗಡದ ಮೊಹಾಲಿಯ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಲೀಕ್ ಪ್ರಕರಣಕ್ಕೆ (Girls’s private video leak case) ಸಂಬಂಧಿಸಿದಂತೆ ಇಲ್ಲಿಯವರೆಗೆ 3 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಲೀಕ್ ಆಗಿದೆ (Girls’s private video leak case) ಎಂದು ವಿದ್ಯಾರ್ಥಿನಿಯರು ವಿಶ್ವವಿದ್ಯಾಲಯದಲ್ಲಿ ಏಕಾಏಕಿ ಪ್ರತಿಭಟನೆ ನಡೆಸಿದ್ದರು. ಈ ಬೆನ್ನಲ್ಲೇ, ಎಚ್ಚೆತ್ತ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆಯನ್ನು ಆರಂಭಿಸಿತು.
ಇದೀಗ ವಿಶ್ವವಿದ್ಯಾಲಯವನ್ನು ಒಂದು ವಾರಗಳ ಕಾಲ ಸೆಪ್ಟಂಬರ್ 24 ರ ವರೆಗೆ ಮುಚ್ಚಲು ಆದೇಶಿಸಲಾಗಿದೆ. ಅಲ್ಲದೇ, ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣಕ್ಕೆ ಹಾಸ್ಟೆಲ್ ವಾರ್ಡನ್ರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಇದನ್ನೂ ಓದಿ : ಮಂಗಳೂರು : ವಿದ್ಯಾರ್ಥಿಗಳ ಕಿಸ್ಸಿಂಗ್ ವಿಡಿಯೋ ವೈರಲ್ – ಓರ್ವ ವಿದ್ಯಾರ್ಥಿಯ ಬಂಧನ
ಭಾನುವಾರ ಬೆಳಿಗ್ಗೆ ಸುಮಾರು 60 ವಿದ್ಯಾರ್ಥಿನಿಯ ಖಾಸಗಿ (ಸ್ನಾನ ಮಾಡುತ್ತಿರುವ) ವಿಡಿಯೋ ಲೀಕ್ ಆಗಿವೆ ಎನ್ನಲಾಗಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಹಲವು ವಿದ್ಯಾರ್ಥಿನಿಯರು ಗಾಬರಿಗೆ ಒಳಗಾಗಿದ್ದರು. ಒಬ್ಬ ವಿದ್ಯಾರ್ಥಿನಿ ಮೂರ್ಛೆಹೋಗಿದ್ದಳ. ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿಯು ಅಘಾತ ಮೂಡಿಸಿತ್ತು.
ಈ ಬೆನ್ನಲ್ಲೇ ವಿಚಾರಣೆ ಆರಂಭಿಸಿದ್ದ ವಿದ್ಯಾರ್ಥಿನಿಯರು ಆರೋಪಿ ಎನ್ನಲಾದ ಯುವತಿಯನ್ನು ಬಂಧಿಸಿದ್ದರು. ಯಾವ ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದು ಸ್ಪಷ್ಟನೆ ನೀಡಿದರು. ಯುವತಿ ತನ್ನ ಖಾಸಗಿ ವಿಡಿಯೋ ಮಾತ್ರ ತನ್ನ ಬಾಯ್ಪ್ರೆಂಡ್ನೊಂದಿಗೆ ಹಂಚಿಕೊಂಡಿದ್ದಳು ತನಿಖೆಯಲ್ಲಿ ತಿಳಿದುಬಂದಿದೆ. ವಿದ್ಯಾರ್ಥಿನಿಯ ಮೊಬೈಲ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಇದೀಗ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಯುವಕನನ್ನು ಬಂಧಿಸಲಾಗಿದೆ. ಬಂಧಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ : Chandigarh University : ವಿದ್ಯಾರ್ಥಿನಿಯ ಖಾಸಗಿ ವಿಡಿಯೋ ಲೀಕ್ : ಪ್ರತಿಭಟನೆ