ಮಾಜಿ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಇಂದು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ (Amarindar Singh Joins BJP). ಆ ಮೂಲಕ ತಾವು ಆರಂಭಿಸಿದ್ದ ನೂತನ ಪಕ್ಷ ಪಂಜಾಬ್ ಲೋಕ್ ಕಾಂಗ್ರೆಸ್ (PLC) ಅನ್ನು ಬಿಜೆಪಿಯೊಂದಿಗೆ ವಿಲೀನ ಮಾಡಿದ್ದಾರೆ.
ಕಳೆದ 2 ದಿನಗಳಿಂದ ಅಮರೀಂದರ್ ಸಿಂಗ್ ಬಿಜೆಪಿ ಸೇರ್ಪಡೆಯಾಗುತ್ತಾರೆ ಎನ್ನುವ ಬಗ್ಗೆ ಖಚಿತವಾಗಿತ್ತು. ಈ ಬೆನ್ನಲ್ಲೇ, ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಅಮರಿಂದರ್ ಸಿಂಗ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸೆ.ಪಿ.ನಡ್ಡಾ ಸೇರಿದಂತೆ ಇತರೆ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದರು.
ಇಂದು ಸೋಮವಾರ ಕ್ಯಾ.ಅಮರೀಂದರ್ ಸಿಂಗ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್, ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಬಿಜೆಪಿ ಪಕ್ಷದ ಶಾಲು ಹಾಕುವ ಮೂಲಕ ಅಮರೀಂದರ್ರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಇದನ್ನೂ ಓದಿ : CM Bhagwanth Mann : ಪಂಜಾಬ್ ಸಿಎಂರನ್ನು ವಿಮಾನದಿಂದ ಕೆಳಗಿಸಿದ ಸಿಬ್ಬಂದಿ?
ಕಳೆ ಪಂಜಾಬ್ ವಿದಾನ ಸಭೆ ಚುನಾವಣೆಗೂ ಮುಂಚೆ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಸ್ಥಾನದಿಂದ ಕ್ಯಾ.ಅಮರೀಂದರ್ ಸಿಂಗ್ ರನ್ನು ಕೆಳಗಿಳಿಸಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಅಮರೀಂದರ್ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದರು. ಅಲ್ಲದೇ, ಚುನಾವಣೆಯಲ್ಲಿ ತಮ್ಮದೇ ನೂತನ ಪಂಜಾಬ್ ಲೋಕ್ ಕಾಂಗ್ರೆಸ್ ಪಕ್ಷ ಕಟ್ಟಿಕೊಂಡು ಚುನಾವಣೆಗೆ ದುಮುಕಿದ್ದರು. ಈ ಚುನಾವಣೆಯಲ್ಲಿ ಅಮರೀಂದರ್ ಸೇರಿದಂತೆ ಪಕ್ಷದಿಂದ ಯಾರು ಶಾಸಕರಾಗಿ ಆಯ್ಕೆಯಾಗಿರಲಿಲ್ಲ.
Former Punjab CM Capt Amarinder Singh joins BJP; merges his party Punjab Lok Congress (PLC) with BJP pic.twitter.com/nXCINNzNLI
— ANI (@ANI) September 19, 2022
ಚುನಾವಣೆಯ ಸಮಯದಲ್ಲಿಯೇ ಅಮರೀಂದರ್ ಸಿಂಗ್ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಆಗಲೇ, ರಾಜಕೀಯ ವಿಮರ್ಶಕರು ಅಮರೀಂದರ್ ಸಿಂಗ್ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂಬ ಭವಿಷ್ಯ ನುಡಿದಿದ್ದರು. ಇದೀಗ, ಆ ಭವಿಷ್ಯ ಸತ್ಯವಾಗಿದ್ದು, ಅಮರೀಂದರ್ ಸಿಂಗ್ ಇದೀಗ ಬಿಜೆಪಿಯ ಜೊತೆ ರಾಜಕೀಯ ಕಣಕ್ಕೆ ಇಳಿಯಲಿದ್ದಾರೆ (Amarindar Singh Joins BJP). ಆ ಮೂಲಕ ಪಂಜಾಬ್ ಇತಿಹಾಸದಲ್ಲಿ ಪಂಜಾಬ್ ಲೋಕ್ ಕಾಂಗ್ರೆಸ್ ಎಂಬ ಪಕ್ಷ ಅಲ್ಪ ಅವಧಿಯಲ್ಲಿಯೇ ತನ್ನ ಅಸ್ತಿತ್ವ ಕಳೆದುಕೊಂಡಿದೆ.
60 ವರ್ಷದ ಅಮರೀಂದರ್ ಸಿಂಗ್ ತಮ್ಮ ಇಳಿವಯಸ್ಸಿನಲ್ಲಿ ಮತ್ತೊಮ್ಮೆ ರಾಜಕೀಯ ಅಖಾಡದಲ್ಲಿ ಪರೀಕ್ಷಿಗೆ ಇಳಿದಿದ್ದಾರೆ. ಇನ್ನೊಂದೆಡೆ, ಕೃಷಿ ಕಾಯ್ದೆಗಳಿಂದ ಪಂಜಾಬ್ ಜನರಿಂದ ಅವಕೃಪೆಗೆ ಒಳಗಾಗಿದ್ದ ಬಿಜೆಪಿ ಅಮರಿಂದರ್ ಮೂಲಕ ಪಂಜಾಬ್ನಲ್ಲಿ ತಮ್ಮ ಪಕ್ಷದ ವಿಸ್ತರಣೆ ಸಜ್ಜಾಗಿ ನಿಂತಿದೆ. ಸೋತ ಅಮರೀಂದರ್ ಸಿಂಗ್ ಮತ್ತು ಈ ಮೊದಲೇ ವಿರೋಧಿಸಿದ್ದ ಬಿಜೆಪಿ ಪಕ್ಷವನ್ನು ಪಂಜಾಬ್ ಜನರು ಹೇಗೆ ಸ್ವೀಕರಿಸಲಿದ್ದಾರೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.ಇದನ್ನೂ ಓದಿ : Breaking News: ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ರಾಜೀನಾಮೆ