ಐಎಎಸ್ ಅಧಿಕಾರಿ, ಮುಜುರಾಯಿ ಇಲಾಖೆ ಆಯುಕ್ತೆ ಆಗಿರುವ ರೋಹಿಣಿ ಸಿಂಧೂರಿಯವರ (Rohini Sinduri) ಮಾವ ನಾರಾಯಣ ರೆಡ್ಡಿಯವರು ನಿಧನ ಹೊಂದಿದ್ಧಾರೆ.
ಮಾಜಿ ಸಚಿವ ಚೆಲುವರಾಯಸ್ವಾಮಿ ಸೇರಿದಂತೆ ಹಲವು ಮುಖಂಡರು, ಅಧಿಕಾರಿಗಳು ರೋಹಿಣಿ ಸಿಂಧೂರಿ ಅವರ ನಿವಾಸಕ್ಕೆ ತೆರಳಿ ನಾರಾಯಣ ರೆಡ್ಡಿಯವರ ಅಂತಿಮ ದರ್ಶನ ಪಡೆದಿದ್ದಾರೆ. ರೋಹಿಣಿ ಸಿಂಧೂರಿಯವರಿಗೂ ಹಾಗೂ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದ್ಧಾರೆ.
ಇನ್ನು, ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಯವರು (Rohini Sinduri) ಭ್ರಷ್ಠಾಚಾರ ಮಾಡಿದ್ದಾರೆ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದರು. ಆ ಬೆನ್ನಲ್ಲೇ, ಅವರ ಮೇಲೆ ವಿಚಾರಣೆಗೆ ಆದೇಶಿಸಲಾಗಿತ್ತು.
ಇದೀಗ, ಶಾಸಕ ಸಾ.ರಾ.ಮಹೇಶ್ ಅವರು ಕಳೆದ ಒಂದು ವಾರದ ಕೆಳಗೆ ರೋಹಿಣಿ ಸಿಂಧೂರಿಯವರ ಮೇಲೆ ಒಂದು ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ದಾವೆ ಹೂಡಿದ್ದಾರೆ. ಇದನ್ನೂ ಓದಿ : ಅಕ್ರಮ ಆರೋಪ : ರೋಹಿಣಿ ಸಿಂಧೂರಿಗೆ ನೋಟಿಸ್ ಜಾರಿ