ಬಾಲಿವುಟ್ ನಟ ಇಮ್ರಾನ್ ಹಶ್ಮಿಯವರು (Imran Hashmi) ತಮ್ಮ ಗ್ರೌಂಡ್ ಜೀರೋ ಚಿತ್ರದ ಚಿತ್ರೀಕರಣಕ್ಕಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದರು. ಈ ವೇಳೆ ನಟನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಶೂಟಿಂಗ್ ಮುಗಿಸಿ ಪಹಲ್ಗಾಮ್ ಮುಖ್ಯ ಮಾರುಕಟ್ಟೆಗೆ ಹೋದಾಗ ಅಪರಿಚಿತರು ಇಮ್ರಾನ್ ಹಸ್ಮಿ ಮೇಲೆ ಕಲ್ಲು ಎಸೆದಿದ್ದಾರೆ ಎನ್ನಲಾಗಿದೆ. ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳ ವಿರುದ್ಧ ಸೆಕ್ಷನ್ 147, 148, 370, 336, 323 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಗ್ರೌಂಡ್ ಜೀರೋ ಚಿತ್ರವನ್ನು ತೇಜಸ್ ದಿಯೋಸ್ಕರ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ (Imran Hashmi) ಸೇನಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇಲ್ಲಿಯ ತನಕ ಪೊಲೀಸರು ಯಾರನ್ನು ಬಂದಿಸಿಲ್ಲ ಎಂದು ಹೇಳಿದ್ದಾರೆ.
ಸಿಸಿ ಕ್ಯಾಮೆರಾ ಪರಿಶೀಲನೆ ಮಾಡುಲಾಗುತ್ತಿದ್ದು ಆರೋಪಿಗಳನ್ನು ಬಂಧಿಸುವುದಾಗಿ ಹೇಳಿದ್ದಾರೆ. ಈ ಸಂಬಂಧ ಪಹಲ್ಗಾಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ : ಬಾಲಿವುಡ್ ಟ್ರೋಲಿಗರಿಗೆ ‘ಬ್ರಹ್ಮಾಸ್ತ್ರ’ವಾದ ಆಲಿಯಾ ಮಾತು – ಮತ್ತೊಂದು ‘ಫ್ಲಾಪ್ ಬಸ್ಟರ್’ ಖಚಿತನಾ?