ಕಾಲುವೆಯ ಮೇಲೆ ಹಾದು ಹೋಗಿದ್ದ ರಾಷ್ಟ್ರೀಯ ಹೆದ್ದಾರಿಯ ಸ್ಟೀಲ್ ಸೇತುವೆಗೆ ಹಾಕಿದ್ದ 3800 ನಟ್ ಹಾಗೂ ಬೋಲ್ಟ್ಗಳನ್ನು ಕದ್ದಿರುವ (Bridge Nut Bolt Stolen) ಬಗ್ಗೆ ವರದಿಯಾಗಿದೆ. ಸ್ಟೀಲ್ ಸೇತುವೆಯ ಎಲ್ಲಾ ನಟ್ ಹಾಗೂ ಬೋಲ್ಟ್ಗಳನ್ನು ಕಳ್ಳರು ರಾತ್ರೋರಾತ್ರಿ ಕದ್ದಿದ್ದಾರೆ. ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ಸ್ವಲ್ಪದರಲ್ಲಿಯೇ ತಪ್ಪಿದೆ.
ಉತ್ತರ ಪ್ರದೇಶ ಹಾಗೂ ಹರಿಯಾಣವನ್ನು ಸೇರಿಸುವ ರಾಷ್ಟ್ರೀಯ ಹೆದ್ದಾರಿ 344 ರ ಶರಣ್ಪರ ಹಾಗೂ ಪಂಚುಕ್ಲಾ ನಗರಗಳ ನಡುವಿನ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ರಾತ್ರಿ ಈ ಕೆನಾಲ್ ಸೇತುವೆಯ ಮೇಲೆ ಟ್ರಕ್ ಮೇಲೆ ಕುಳಿತು ಹೊರಟಿದ್ದ ಕೆಲವರು ಟಾರ್ಚ್ನ ಬೆಳಕು ಹಾಕಿದ್ದಾರೆ. ಈ ವೇಳೆ ನಟ್, ಬೋಲ್ಟ್ ಇಲ್ಲದೇ ಇರುವುದು ಪತ್ತೆಯಾಗಿದೆ. ಅನಂತರ, ಟ್ರಕ್ನಿಂದ ಇಳಿದ ಅವರು ಸೇತುವೆಯ ಎರಡೂ ಭಾಗಗಳಲ್ಲಿ ನೋಡಿದಾಗ ನಟ್, ಬೋಲ್ಟ್ ಗಳನ್ನು ಕಿಡಿಗೇಡಿಗಳು ಕದ್ದೊಯ್ದಿರುವುದು (Bridge Nut Bolt Stolen) ಪತ್ತೆಯಾಗಿದೆ. ಇದನ್ನೂ ಓದಿ : 14 ವರ್ಷ ನ್ಯಾಯಾಲಯದಲ್ಲಿ ಕೆಲಸ ಮಾಡಿದ್ದ 72 ವರ್ಷದ ನಕಲಿ ವಕೀಲೆ : ಬಂಧನ
ಆ ಕ್ಷಣವೇ ಎಚ್ಚೆತ್ತೆ ಸವಾರರು ಹತ್ತಿರದ ಯಮುನಾನಗರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿದ್ದ ಸದ್ಬವ್ ಕನ್ಸ್ಟ್ರಕ್ಷನ್ ಕಂಪನಿ, ಯಮುನಾನಗರದ ಪೊಲೀಸ್ ಠಾಣೆಯಲ್ಲಿ 3800 ನಟ್, ಬೋಲ್ಟ್ ಕಳ್ಳತನವಾದ ಬಗ್ಗೆ ದೂರು ನೀಡಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದು, ಕಳ್ಳರಿಗಾಗಿ ಬಲೆ ಬೀಸಿದ್ದಾರೆ. ಸೇತುವೆಗೆ ಇಂದು ಮಂಗಳವಾರವೇ ಮರಳಿ ನಟ್ ಬೋಲ್ಟ್ ಹಾಕಲಾಗುವುದು ಎಂದು ಸದ್ಭವ್ ಕನ್ಸ್ಟ್ರಕ್ಷನ್ ಕಂಪನಿಯ ಇಂಜಿನಿಯರ್ ತಿಳಿಸಿದ್ದಾರೆ.
ಇದನ್ನೂ ಓದಿ : ಬೈಕ್ ಕಳ್ಳತನ ಮಾಡಿಸುತ್ತಿದ್ದ ಖತರ್ನಾಕ್ ಪೊಲೀಸ್ ಬಂಧನ