ಎಸ್ಬಿಐ ಬ್ಯಾಂಕ್ ಖಾಲಿ ಇರುವ 1673 ಕ್ಲರ್ಕ್ ಹುದ್ದೆಗಳಿಗಾಗಿ (SBI Bank Jobs) ಇಂದು ಅಧಿಸೂಚನೆ ಹೊರಡಿಸಲಾಗಿದೆ. ಪದವೀಧರ ವಿದ್ಯಾರ್ಥಿಗಳು ಅಕ್ಟೋಬರ್ 2022ರ 12ರೊಳಗೆ ಅರ್ಜಿ ಸಲ್ಲಿಸಬಹುದು.
ಹುದ್ದೆ : ಬ್ಯಾಂಕ್ ಕ್ಲರ್ಕ್
ಹುದ್ದೆಗಳ ಸಂಖ್ಯೆ : 1673
ವಿದ್ಯಾರ್ಹತೆ : ಕಾನುನು ರೀತ್ಯಾ ಸ್ಥಾಪಿತಗೊಂಡ ವಿಶ್ವವಿದ್ಯಾಲಯಗಳಿಂದ ಪದವಿ ತೇರ್ಗಡೆಯಾಗಿರಬೇಕು.
ವಯಸ್ಸಿನ ಮಿತಿ : ವಯಸ್ಸು 30 ವರ್ಷ ಮೀರಿರಬಾರದು. (ಎಸ್ಸಿಎಸ್ಟಿಗೆ 5 ವರ್ಷ, ಒಬಿಸಿಗೆ 3 ವರ್ಷ. ಅಂಗವಿಕಲ ಅಭ್ಯರ್ಥಿಗಳಿಗೆ 15 ವರ್ಷ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಮಿತಿ ಹೆಚ್ಚಿಸಲಾಗಿದೆ).
ಆಯ್ಕೆ ಪ್ರಕ್ರಿಯೆ : ಎರಡು ಹಂತಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಮೊದಲ ಹಂತದಲ್ಲಿ ಪ್ರಿಲಿಮಿನರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು. ಅನಂತರ ಮುಖ್ಯ ಪರೀಕ್ಷೆ ಬರೆಯಬೇಕು.
ಇದನ್ನೂ ಓದಿ : SBI Jobs : ಪದವಿ ಪಾಸಾದವರಿಗೆ 5008 ಹುದ್ದೆಗಳು – ಈಗಲೇ ಅರ್ಜಿ ಸಲ್ಲಿಸಿ
ಅರ್ಜಿ ಶುಲ್ಕ : ಅರ್ಜಿ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಆನ್ಲೈನ್ ಮೂಲಕ 750 ರೂಪಾಯಿ ಅರ್ಜಿ ಶುಲ್ಕ ಪಾವತಿ ಮಾಡಬೇಕು. ಎಸ್ಸಿ, ಎಸ್ಟಿ, ದಿವ್ಯಾಂಗ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 22 ಸೆಪ್ಟಂಬರ್ 2022
ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಗೆ ಕೊನೆಯ ದಿನಾಂಕ : 12 ಅಕ್ಟೋಬರ್ 2022
ಪರೀಕ್ಷೆ :
ಪೂರ್ವಭಾವಿ ಪರೀಕ್ಷೆ : ಅಕ್ಟೋಬರ್ 17, 18, 19 ಮತ್ತು 20.
ಮುಖ್ಯ ಪರೀಕ್ಷೆ : ಜನವರಿ/ಪೆಬ್ರವರಿ 2023
ಎಸ್ಬಿಐ ಬ್ಯಾಂಕ್ ಕ್ಲರ್ಕ್ ಹುದ್ದೆಗೆ (SBI Bank Jobs) ಅರ್ಜಿ ಸಲ್ಲಿಸಬಯಸುವ ಆಸಕ್ತ ಅರ್ಹ ವಿದ್ಯಾರ್ಥಿಗಳು, ಬ್ಯಾಂಕಿನ ಅಧಿಕೃತ ಜಾಲತಾಣ https://sbi.co.in/web/careers ಗೆ ಅಥವಾ https://ibpsonline.ibps.in/ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು ಹಾಗೂ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ : Teachers Recruitment : ರಾಜ್ಯದಲ್ಲಿ 45,565 ಶಿಕ್ಷಕರ ಹುದ್ದೆಗಳು ಖಾಲಿ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್