ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರಪ್ರದೇಶದ (Uttar Pradesh) ದಲ್ಲಿ ಸುಮಾರು 13 ಜನ ಸಾವನ್ನಪ್ಪಿದ್ದು, 11 ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಭಾಗದ 10 ಜಿಲ್ಲೆಗಳಲ್ಲಿ ಶಾಲೆಗಳನ್ನು ಬಂದ್ ಮಾಡಲು ಸರ್ಕಾರ ಆದೇಶಿಸಿದೆ. ಗುರುಗ್ರಾಮದಲ್ಲಿರುವ ಖಾಸಗಿ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ.
ಉತ್ತರಪ್ರದೇಶದ ಕೆಲ ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಶಾಲೆ ಮುಚ್ಚಲಾಗಿದೆ. ಸಿಡಿಲು ಬಡಿದು ಗೋಡೆ ಕುಸಿದ ಘಟನೆಯಲ್ಲಿ 13 ಜನ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ..
ಉತ್ತರ ಪ್ರದೇಶದಲ್ಲಿ ಗುರುವಾರ ಸಾಯಂಕಾಲ 5 ರ ನಂತರ ಹಾಗೂ ಶುಕ್ರವಾರ ಬೆಳಿಗ್ಗೆ 8 ರ ಒಳಗೆ 40 ಮಿ.ಮೀ ಮಳೆ ಸುರಿದಿದೆ ಎಂದು ಮೆಟ್ರೋಲಾಜಿಕಲ್ ಇಲಾಖೆ ತಿಳಿಸಿದೆ. ಇಂದೂ ಸಹ ಎಲ್ಲೋ ಅಲರ್ಟ್ ಜಾರಿ ಮಾಡಿದೆ.
ದೆಹಲಿಯಲ್ಲೂ ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿವೆ. ಪ್ರಮುಖ ರಸ್ತೆಗಳಲ್ಲಿ ಸಂಚಾರದಟ್ಟಣೆ ಹೆಚ್ಚಾಗಿದ್ದು, ಟ್ರಾಫಿಕ್ ಸಮಸ್ಯೆ ನಿಯಂತ್ರಿಸುವಂತೆ ಸಹಾಯವಾಣಿಗೆ ಕರೆಗಳು ಬರಲಾರಂಭಿಸಿವೆ. ರಕ್ಷಣಾತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದು, ಅಲ್ಲಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸಲಾಗುತ್ತಿವೆ. ಇದನ್ನೂ ಓದಿ : ಮುಂದಿನ 4 ದಿನ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯೆತೆ : ಹವಾಮಾನ ಇಲಾಖೆ