ಮಹಾರಾಷ್ಟ್ರದ ಪುಣೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ (Pakistan Jindabad Slogan) ಎಂಬ ಘೋಷಣೆ ಕೂಗಿದ್ದ ಪಿಎಫ್ಐ ಕಾರ್ಯಕರ್ತರನ್ನು ಇಂದು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ದೇಶಾದ್ಯಂತ ಪಿಎಫ್ಐ ಮೇಲೆ ರಾಷ್ಟ್ರೀಯ ತನಿಖಾ ದಳ (NIA) ದಾಳಿ ನಡೆಸಿತ್ತು. ಈ ದಾಳಿಯನ್ನು ಖಂಡಿಸಿ ಪುಣೆಯಲ್ಲಿ ಶುಕ್ರವಾರ PFI ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪಿಎಫ್ಐ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದರು.
#WATCH | Maharashtra: ‘Pakistan Zindabad’ slogans were heard outside the District Collector's office yesterday in Pune City where PFI cadres gathered against the recent ED-CBI-Police raids against their outfit. Some cadres were detained by Police; they were arrested this morning. pic.twitter.com/XWEx2utZZm
— ANI (@ANI) September 24, 2022
ಮೊಹಮ್ಮದ್ ರಿಯಾಜ್ ಸಯ್ಯದ್ ಸೇರಿದಂತೆ 60-70 ಜನ ಘೋಷಣೆ ಕೂಗಿದ್ದರು. ಇವರ ಮೇಲೆ ಪುಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಇಂದು, ಪುಣೆ ಪೊಲೀಸರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ (Pakistan Jindabad Slogan) ಕೂಗಿದ ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ದೇಶದಾದ್ಯಂತ 13 ರಾಜ್ಯಗಳ ಪಿಎಫ್ಐ ಕಚೇರಿ ಮತ್ತು ನಾಯಕರ ಮನೆಗಳ ಮೇಲೆ ಏಕಕಾಲಕ್ಕೆ ಎನ್ಐಎ ದಾಳಿ ನಡೆಸಿತ್ತು. ಈ ದಾಳಿಯ ನಂತರ 106 ಜನ ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಹಲವರ ಬಂಧನಕ್ಕಾಗಿ ಪೊಲೀಸರು ಇನ್ನೂ ಕಾದು ಕುಳಿತಿದ್ದಾರೆ. ಕೇರಳದಲ್ಲಿ ಶುಕ್ರವಾರ ಪಿಎಫ್ಐ ನಡೆಸಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು.
ಇದನ್ನೂ ಓದಿ : ಉ.ಪ್ರದೇಶ ಚುನಾವಣೆ : ಪಾಕಿಸ್ತಾನ್ ಜಿಂದಾಬಾದ್ ಎಂದ 7 ಜನರ ಮೇಲೆ ಪ್ರಕರಣ ದಾಖಲು