ಲಂಡನ್ನ 2 ಎರೇನಾದಲ್ಲಿ ನಡೆಯುತ್ತಿರುವ ‘ಲೇವರ್ ಕಪ್’ನ (Laver Cup) ಸೋಲಿನೊಂದಿಗೆ ಟೆನ್ನಿಸ್ ಲೋಕದ ದಿಗ್ಗಜ ರೋಜರ್ ಫೆಡರರ್ (41) (Roger Federer) ತಮ್ಮ ವೃತ್ತಿ ಜೀವನಕ್ಕೆ ಭಾವುಕ ವಿರಾಮ ನೀಡಿದ್ದಾರೆ.
ಇಂದು ಲೇವರ್ ಕಪ್ನ ಡಬಲ್ಸ್ ಟೈ ನಲ್ಲಿ ರೆಫೇಲ್ ನಡಾಲ್ರೊಂದಿಗೆ ಫೆಡರರ್ ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯ ಆಡಿದರು. ಟೀಂ ವರ್ಲ್ಡ್ ತಂಡದ ಟಿಯಾಫೊ ಮತ್ತು ಜ್ಯಾಕ್ ಸಾಕ್ ಎದುರು ಇಬ್ಬರು ದಿಗ್ಗಜರು ಸೋಲನ್ನೊಪ್ಪಿಕೊಂಡರು.
ಪಂದ್ಯದಲ್ಲಿ ಸೋಲುತ್ತಿದ್ದಂತೆಯೇ ರೋಜರ್ ಫೆಡರರ್ (Roger Federer), ರಪೇಲ್ ನಡಾಲ್ ಸೇರಿದಂತೆ ತಮ್ಮ ಸಹೋದ್ಯೋಗಿಗಳೊಂದಿಗೆ ತಬ್ಬಿಕೊಂಡು ಭಾವುಕ ವಿದಾಯ ಹೇಳಿದರು.
ಇದನ್ನೂ ಓದಿ : ಅಂತರಾಷ್ಟ್ರೀಯ ಕ್ರಿಕೆಟ್ಗೆ ಕನ್ನಡಿಗ ರಾಬಿನ್ ಉತ್ತಪ್ಪ ನಿವೃತ್ತಿ
ಇದು ರೋಜರ್ ಫೆಡರರ್ ಅಂತಿಮ ಪಂದ್ಯಕ್ಕೆ ಪತ್ನಿ ಮತ್ತು ಮಕ್ಕಳು ಸಾಕ್ಷಿಯಾಗಿದ್ದರು. ಪಂದ್ಯದ ನಂತರ ಮಾತನಾಡಿರ ರೋಜರ್, ಇಂದು ನನಗೆ ಅಧ್ಬುತ ದಿನವಾಗಿದೆ. ನಾನು ಇಂದು ಸಂತೋಷವಾಗಿದ್ದೇನ. ಯಾವುದೇ ಬೇಸರವಿಲ್ಲ. ಇಂದು ನಾನು ಬೂಟುಗಳನ್ನು ಮತ್ತೊಮ್ಮೆ ಹಾಕಿಕೊಳ್ಳುವುದನ್ನು ಸಂತೋಷಿಸಿದ್ದೇನೆ. ಆದರೆ, ಎಲ್ಲದಕ್ಕೂ ಕೊನೆಯಿದೆ ಎಂದು ಹೇಳಿದ್ದಾರೆ.
ರೋಜರ್ ಫೆಡರರ್ ತಮ್ಮ ಪಂದ್ಯದ ನಂತರ ಸಹೋದ್ಯೋಗಿಗಳು ಮತ್ತು ಪತ್ನಿ, ಮಕ್ಕಳನ್ನುತಬ್ಬಿಕೊಂಡು ತೀವ್ರ ಭಾವುಕವಾದರು.
20 ಗ್ರಾಂಡ್ ಸ್ಲ್ಯಾಮ್ ವಿಜೇತರಾಗಿರುವ ರೋಜರ್ ಫೆಡರರ್ ಒಂದು ವಾರದ ಹಿಂದೆ ತಮ್ಮ ನಿವೃತ್ತಿ ಘೋಷಣೆ ಮಾಡಿದ್ದರು. ಇಂದು ಆಡದ ಲೆವರ್ ಕಪ್ ಅವರ ವೃತ್ತಿ ಜೀವನದ ಕೊನೆಯ ಪಂದ್ಯವಾಗಿದೆ.
ಇದನ್ನೂ ಓದಿ : ಇಹಲೋಕ ತ್ಯಜಿಸಿದ ಬ್ಯಾಡ್ಮಿಂಟನ್ ಕ್ಷೇತ್ರದ ದಂತಕಥೆ ನಂದು ನಾಟೇಕರ್