ಜೋಗ್ಫಾಲ್ಸ್ (Jog Falls) ಬಳಿ ಇರುವ ಪ್ರಸಿದ್ಧ ವಡನ್ಬೈಲ್ ಪದ್ಮಾವತಿ ದೇವಾಲಯದಲ್ಲಿ 11 ದಿನಗಳವರೆಗೆ ದೈನಂದಿನ ಪೂಜೆ ಮತ್ತು ನಾಗದೋಷ ಪೂಜೆ ಇರುವುದಿಲ್ಲ ಎಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೇವಾಲಯದ ಧರ್ಮದರ್ಶಿ ಆಗಿರುವ ವೀರರಾಜ್ ಜೈನ್ ಅವರ ಸಹೋದರರು ಅಪಘಾತದಲ್ಲಿ ನಿಧನರಾದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಸೆಪ್ಟೆಂಬರ್ 23ರ ಶನಿವಾರದಿಂದ ಅಕ್ಟೋಬರ್ 3ರ ಸೋಮವಾರದವರೆಗೆ ಪೂಜಾ ಕಾರ್ಯಗಳು ನಡೆಯಲ್ಲ.
ಈ ಹಿನ್ನೆಲೆಯಲ್ಲಿ ಭಕ್ತಾದಿಗಳು ಸಹಕರಿಸಬೇಕಾಗಿ ದೇವಾಲಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಮನವಿ ಮಾಡಿದೆ.
ADVERTISEMENT
ADVERTISEMENT