ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ (S M Krishna) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ (Manipal Hospital) ದಾಖಲಿಸಲಾಗಿದೆ.
ಶ್ವಾಸಕೋಶದ ಸೋಂಕಿನಿಂದ (Repository Infection) ಬಳಲುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎಸ್ ಎಂ ಕೃಷ್ಣ ಅವರಿಗೆ ಈಗ 90 ವರ್ಷ ವಯಸ್ಸು.
ಎಸ್ ಎಂ ಕೃಷ್ಣ ಅವರು ತೀವ್ರ ಜ್ವರದಿಂದಲೂ ಬಳಲುತ್ತಿದ್ದಾರೆ. ಮಣಿಪಾಲ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸಲಹೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ADVERTISEMENT
ADVERTISEMENT