ಭಾರತದ ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥರನ್ನಾಗಿ (ಸಿಡಿಎಸ್) ನಿವೃತ್ತ ಲೆ.ಜ ಅನಿಲ್ ಚೌವ್ಹಾಣ್ರನ್ನು (CDS Anil Chauhan) ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
2021ರಲ್ಲಿ ಭಾರತೀಯ ಸೇನೆಯಿಂದ ನಿವೃತ್ತರಾಗಿದ್ದ ಲೆ.ಜ ಅನಿಲ್ ಚೌವ್ಹಾಣ್ ಅವರನ್ನು ಮಿಲಿಟರಿ ವ್ಯವಹಾರಗಳ ಇಲಾಖೆ ದೇಶದ ಅತ್ಯುನ್ನತ ಸೇನಾಧಿಕಾರಿಯ ಹುದ್ದೆಗೆ ನೇಮಕ ಮಾಡಿದೆ.
ಜನವರಿ 1, 2020 ರಲ್ಲಿ ಈ ಹುದ್ದೆಯನ್ನು ಕೇಂದ್ರ ಸರ್ಕಾರ ಸೃಷ್ಠಿಸಿತ್ತು. ಪ್ರಥಮ ಸಿಡಿಎಸ್ ಆಗಿ ಜನರಲ್ ಬಿಪಿನ್ ರಾವತ್ ನೇಮಕರಾಗಿದ್ದರು. ಕಳೆದ ವರ್ಷದ ಡಿಸೆಂಬರ್ 8ರಂದು ತಮಿಳುನಾಡಿನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದರು.
ಅನಂತರ ಈ ಹುದ್ದೆ ಖಾಲಿ ಉಳಿದಿತ್ತು. ಇದೀಗ, ಈ ಹುದ್ದೆಗೆ ನಿವೃತ್ತ ಲೆ.ಜ ಅನಿಲ್ (CDS Anil Chauhan) ಆಯ್ಕೆಯಾಗಿದ್ದಾರೆ. ಇವರ ಅಧಿಕಾರಾವಧಿ 5 ವರ್ಷಗಳ ಕಾಲ ಇರಲಿದೆ.
ಇದನ್ನೂ ಓದಿ : ಸೇನಾ ಹೆಲಿಕಾಪ್ಟರ್ ಅಪಘಾತ: ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಇನ್ನಿಲ್ಲ