ಸಾರ್ವಜನಿಕ ಗ್ರಂಥಾಲಯ ಓದುಗರಿಗೆ ಸಾರ್ವಜನಿಕ ಗ್ರಂಥಾಲಯ ವಿಶೇಷ ಸೂಚನೆ ನೀಡಿದ್ದು, ಉಚಿತವಾಗಿ ಆನ್ಲೈನ್ನಲ್ಲಿ ಪುಸ್ತಕಗಳ ಓದಲು ಅವಕಾಶ ಮಾಡಿಕೊಟ್ಟಿದೆ.
ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ‘ಡಿಜಿಟಲ್ ಗ್ರಂಥಾಲಯದ ಸದಸ್ಯತ್ವ’ (Digital Library Membership) ಹೊಂದುವ ಕುರಿತು ಪ್ರಕಟಣೆ ಹೊರಡಿಸಿದೆ.
ಡಿಜಿಟಲ್ ಗ್ರಂಥಾಲಯದ ಸದಸ್ಯತ್ವ ಹೊಂದುವ ಸಾರ್ವಜನಿಕರು ತಾವಿರುವಲ್ಲಿಯೇ ಮೊಬೈಲ್ ಹಾಗೂ ಕಂಪ್ಯೂಟರ್ನಲ್ಲಿ ಉಚಿತವಾಗಿ ಗ್ರಂಥಗಳ ಅಧ್ಯಯನ ಮಾಡಬಹುದಾಗಿದೆ.
ಡಿಜಿಟಲ್ ಗ್ರಂಥಾಲಯದಲ್ಲಿ ಎಲ್ಲಾ ರೀತಿಯ ಪುಸ್ತಕಗಳು ಲಭ್ಯವಿರುವಂತೆ ರಾಜ್ಯ ಗ್ರಂಥಾಲಯ ಇಲಾಖೆ ನೋಡಿಕೊಂಡಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳು, ಜರ್ನಲ್ಸ್ಗಳು, ಅಸೈನ್ಮೆಂಟ್ಗಳ ವಿಡಿಯೋ, ಕಥೆ, ಕಾದಂಬರಿ, ಕವನ ಸಂಕಲನ, ಗಜಲ್, ಜೀವನ ಚರಿತ್ರೆಗೆ ಸಂಬಂಧಿಸಿದ ವಿಭಾಗಗಳ ಜೊತೆಗೆ ಇನ್ನೂ ಹಲವಾರು ವಿಬಾಗಗಳ ಪುಸ್ತಕಗಳನ್ನು ಆನ್ಲೈನ್ನಲ್ಲಿಯೇ ಓದಬಹುದಾಗಿದೆ.
ಮೇಲಿನ ವಿಭಾಗಗಳ ಪುಸ್ತಕಗಳನ್ನು ಉಚಿತವಾಗಿ ಓದಲು ಡಿಜಿಟಲ್ ಗ್ರಂಥಾಲಯದ ಸದಸ್ಯತ್ವ (Digital Library Membership) ಹೊಂದಬೇಕಾಗಿದೆ. ಈ ಸದಸ್ಯತ್ವವನ್ನು e-sarvajanika granthalay app ಮತ್ತು WWW.digitalpubliclibrary.org ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅನಂತರ ನೇರವಾಗಿ ಆನ್ಲೈನಲ್ಲಿ ಅಥವಾ ಮೊಬೈಲ್ ಆ್ಯಪ್ನಲ್ಲಿಯೇ ಪುಸ್ತಕಗಳನ್ನು ಓದಬಹುದಾಗಿದೆ.
ಇದನ್ನೂ ಓದಿ : CM Bommai: ಸಿಎಂ ಬೊಮ್ಮಾಯಿಗೆ ಪುಸ್ತಕದಲ್ಲೇ ತುಲಾಭಾರ..!