ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ಆದ್ರೆ ಗುಜರಾತ್ ವಿಧಾನಸಭಾ ಚುನಾವಣೆ ಘೋಷಣೆ ಮಾಡಿಲ್ಲ.
ಕೇವಲ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯನ್ನೂ ಘೋಷಿಸಿದೆ. 2017ರಲ್ಲಿ ಏಕಕಾಲಕ್ಕೆ ಗುಜರಾತ್ ಮತ್ತು ಹಿಮಾಚಲ ಪ್ರದೇಶಕ್ಕೆ ಚುನಾವಣೆ ಘೋಷಣೆ ಮಾಡಲಾಗಿತ್ತು.
ಗುಜರಾತ್ ವಿಧಾನಸಭೆಯ ಅವಧಿ ಫೆಬ್ರವರಿ 18, 2023ರಂದು ಮುಗಿಯಲಿದೆ. ಹಿಮಾಚಲ ಪ್ರದೇಶ ವಿಧಾನಸಭೆಯ ಅವಧಿ ಜನವರಿ 8ರಂದು ಮುಗಿಯಲಿದೆ.
ಹಿಮಾಚಲಪ್ರದೇಶ ಮತ್ತು ಗುಜರಾತ್ ವಿಧಾನಸಭಾ ಅವಧಿ ಮುಗಿಯುವುದರ ನಡುವೆ ಒಂದು ತಿಂಗಳ ಅಂತರ ಇರುವ ಹಿನ್ನೆಲೆಯಲ್ಲಿ ಗುಜರಾತ್ನಲ್ಲಿ ಮುಂದಿನ ತಿಂಗಳಷ್ಟೇ ಚುನಾವಣೆ ಘೋಷಣೆ ಆಗಬಹುದು.
ಎರಡೂ ರಾಜ್ಯಗಳ ವಿಧಾನಸಭಾ ಅವಧಿ ಮುಗಿಯಲು 1 ತಿಂಗಳ ಅಂತರ ಇರುವ ಕಾರಣ ಗುಜರಾತ್ನಲ್ಲಿ ಅನಗತ್ಯವಾಗಿ ಅಧಿಕ ದಿನ ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸಬೇಕಾಗುತ್ತದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಹಿಮಾಚಲ ಪ್ರದೇಶ ಚುನಾವಣೆ ಮುಹೂರ್ತ:
ಸೂಚನೆ ಪ್ರಕಟ: ಅಕ್ಟೋಬರ್ 17
ನಾಮಪತ್ರ ಸಲ್ಲಿಕೆ ಆರಂಭ: ಅಕ್ಟೋಬರ್ 25
ಮತದಾನ: ನವೆಂಬರ್ 12
ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟ: ಡಿಸೆಂಬರ್ 08
ADVERTISEMENT
ADVERTISEMENT