ಭದ್ರತೆ, ಸುರಕ್ಷತೆ, ಗೌಪ್ಯತೆಯನ್ನು ಗಮನದಲ್ಲಿರಿಸಿಕೊಂಡು ಯೂಸರ್ಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಒದಗಿಸುವ ಭಾಗವಾಗಿ ವಾಟ್ಸಪ್ (WhatsApp) ಪ್ರಮುಖ ನಿರ್ಣಯವನ್ನು ತೆಗೆದುಕೊಂಡಿದೆ. ಹಳೆ ವರ್ಷನ್ನ ಓಎಸ್ನಿಂದ ಕೆಲಸ ಮಾಡುತ್ತಿರುವ ಹಲವು ಫೋನ್ಗಳಿಗೆ ವಾಟ್ಸಪ್ ಸೇವೆ ನಿಲ್ಲಿಸುತ್ತಿರುವುದಾಗಿ ವಾಟ್ಸಪ್ ಸಂಸ್ಥೆ ಪ್ರಕಟಿಸಿದೆ.
ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಟೆಕ್ ಕಂಪನಿಗಳು, ಸೋಷಿಯಲ್ ಮೀಡಿಯಾ ಸಂಸ್ಥೆಗಳು ಕೆಲ ನಿಯಮಗಳನ್ನು ಜಾರಿ ಮಾಡಬೇಕಾಗುತ್ತದೆ. ಇದರ ಭಾಗವಾಗಿಯೇ ಕೆಲ ಹಳೆ ಕಾಲದ ಡಿವೈಸ್ಗಳಿಗೆ ತಮ್ಮ ಸೇವೆ ನಿಲ್ಲಿಸುತ್ತಿರುವುದಾಗಿ ಬಂದ್ ಮಾಡೋದಾಗಿ ಹೇಳುತ್ತವೆ.
ಇದೀಗ ವಾಟ್ಸಪ್ ಕೂಡ ಐಫೋನ್, ಆಂಡ್ರಾಯ್ಸ್ ಡಿವೈಸ್ಗಳಲ್ಲಿ ಕೆಲ ಮಾಡೆಲ್ಗಳಿಗೆ ಅಕ್ಟೋಬರ್ 24ರಿಂದ ಸೇವೆ ನಿಲ್ಲಿಸುವುದಾಗಿ ಪ್ರಕಟಿಸಿದೆ. ಸೆಕ್ಯೂರಿಟಿ ಫೀಚರ್ಗಳ ಅಪ್ಗ್ರೇಡ್, ಯೂಸರ್ಗಳ ಡೇಟಾ ಪ್ರೈವೆಸಿ ಪ್ರೊಟೆಕ್ಷನ್ ಭಾಗವಾಗಿ ಈ ನಿರ್ಣಯ ತೆಗೆದುಕೊಂಡಿರುವುದಾಗಿ ತಿಳಿಸಿದೆ. ಅಂದ ಹಾಗೇ, ಯಾವ್ಯಾವ ಫೋನ್ಗಳಿಂದ ವಾಟ್ಸಪ್ ಸೇವೆ ಬಂದ್ ಆಗಲಿದೆ ಎಂಬುದನ್ನು ನೋಡಿ.
ಐಓಎಸ್ 10, ಐಓಎಸ್ 11 ಓಎಸ್ಗಳೊಂದಿಗೆ ಕೆಲಸ ಮಾಡುತ್ತಿರುವ ಐಫೋನ್ಗಳಲ್ಲಿ ಇನ್ಮುಂದೆ ವಾಟ್ಸಪ್ ಕೆಲಸ ಮಾಡಲ್ಲ. ಐಫೋನ್ 4, ಐಫೋನ್ 4ಎಸ್, ಐಫೋನ್ 5, ಐಫೋನ್ 5 ಸಿ ಫೋನ್ಗಳು ಈ ಓಸ್ಗಳೊಂದಿಗೆ ಕೆಲಸ ಮಾಡುತ್ತವೆ. ಆಪಿಲ್ ನಿಬಂಧನೆಗಳ ಪ್ರಕಾರ ಐಫೋನ್ 4, ಐಫೋನ್ 4ಎಸ್ ಮಾಡೆಲ್ಗಳಲ್ಲಿ ಓಎಸ್ ಅಪ್ಡೇಟ್ ಆಗಲ್ಲ. ಕೇವಲ ಐಫೋನ್ 5, ಐಫೋನ್ 5 ಸಿ ಮಾಡೆಲ್ಗಳಲ್ಲಿ ಮಾತ್ರವೇ ಓಎಸ್ ಅಪ್ಡೇಟ್ಗೆ ಅವಕಾಶವಿದೆ. ಹೀಗಾಗಿ ಈ ಫೋನ್ ಯೂಸರ್ಗಳು ತಮ್ಮ ಡಿವೈಸ್ಗಳನ್ನು ಕೂಡಲೇ ಅಪ್ಡೇಟ್ ಮಾಡಿಕೊಳ್ಳಬೇಕು ಎಂದು ವಾಟ್ಸಪ್ ತಿಳಿಸಿದೆ.
ಐಫೋನ್ ಸೆಟ್ಟಿಂಗ್ಸ್ಗೆ ತೆರಳಿ ಜನರಲ್ ಸೆಕ್ಷನ್ ಅಡಿ ಸಾಫ್ಟ್ವೇರ್ ಅಪ್ಡೇಟ್ ಮೇಲೆ ಕ್ಲಿಕ್ ಮಾಡಿ ಓಎಸ್ ಅಪ್ಗ್ರೇಡ್ ಮಾಡಿಕೊಳ್ಳಬಹುದು..
ಮತ್ತೊಂದು ಕಡೆ ಆಂಡ್ರಾಯ್ಡ್ ಯೂಸರ್ಗಳಿಗೂ ವಾಟ್ಸಪ್ ಹಲವು ಸೂಚನೆ ನೀಡಿದೆ.ಆಂಡ್ರಾಯ್ಡ್ 4.0.4 ವರ್ಷನ್ ಓಎಸ್ನಿಂದ ಕೆಲಸ ಮಾಡುತ್ತಿರುವ ಫೋನ್ಗಳಲ್ಲಿಯೂ ವಾಟ್ಸಪ್ ಸೇವೆ ಬಂದ್ ಮಾಡುತ್ತಿರುವುದಾಗಿ ವಾಟ್ಸಪ್ ತಿಳಿಸಿದೆ. ಈ ಓಎಸ್ ನಂತರದ ವರ್ಷನ್ಗೆ ಯೂಸರ್ಗಳು ಅಪ್ಡೇಟ್ ಮಾಡಿಕೊಳ್ಳುವಂತೆ ಸೂಚಿಸಿದೆ.